ವಿಜಯಪುರ: ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆ ಸುರಿದ ಪರಿಣಾಮ ಇಂಡಿ ತಾಲೂಕಿನ ಮಾರ್ಸನಹಳ್ಳಿಯ ಸಚಿನ್ ಹಿರೇಮಠ ಎಂಬುವರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯ ಗಿಡಗಳು ಸಂಪೂರ್ಣ ನಾಶವಾಗಿವೆ.
ಮಾರ್ಸನಹಳ್ಳಿಯ ಸಚಿನ್ ಹಿರೇಮಠ ಎಂಬುವರು 2 ಎಕರೆ ಪ್ರದೇಶದಲ್ಲಿ ಪಪ್ಪಾಯ ಗಿಡಗಳನ್ನು ಬೆಳೆಸಿದ್ದರು. ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆಯಾದ ಕಾರಣ ಪಪ್ಪಾಯ ಗಿಡಗಳು ನೆಲಕಚ್ಚಿವೆ. ಈಗಾಗಲೇ ಸಾಕಷ್ಟು ಕಾಯಿಗಳನ್ನು ಬಿಟ್ಟು ಗಿಡಗಳು ಸಂಪೂರ್ಣ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇದನ್ನೂ ಓದಿ: ತಂದೆಯಿಂದಲೇ ಲೈಂಗಿಕ ಕಿರುಕುಳ ಆರೋಪ: ಮನೆ ಬಿಟ್ಟಿದ್ದ ಕಂದಮ್ಮ ಚೈಲ್ಡ್ ಕೇರ್ ಹೋಂನಲ್ಲಿ ಸೇಫ್
ಯುವ ರೈತ ಸಚಿನ್ ಹಿರೇಮಠ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಪಪ್ಪಾಯ ಬೆಳೆದಿದ್ದರು. ಇನ್ನೇನು ಹಣ್ಣು ಬಿಡಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ತಯಾರಿಯಲ್ಲಿದ್ದಾಗ ಬಿರುಗಾಳಿ ಸಮೇತ ಬಿಟ್ಟು ಬಿಡದೇ ಮಳೆಯಾಗಿದ್ದರಿಂದ ಪಪ್ಪಾಯ ಗಿಡಗಳು ನೆಲಕ್ಕುರುಳಿವೆ. ನೈಸರ್ಗಿಕ ವಿಕೋಪದಡಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಚಿನ ಹಿರೇಮಠ ಸರ್ಕಾರವನ್ನು ಒತ್ತಾಯಿಸಿದ್ದಾರೆ.