ವಿಜಯಪುರ: ಸಮಾಜಮುಖಿ ಸೇವೆಗಳಿಂದ ಹೆಸರಾಗಿರುವ ಶಿವಮೊಗ್ಗದ ಗುರುಶಾಂತ ವೀರೇಶ್ವರ ಸೇವಾ ಸಮಿತಿ ವತಿಯಿಂದ ವಿಜಯಪುರ ನಗರದ ಲಿಂಗಾಯತ ಸಮುದಾಯ ಭವನದಲ್ಲಿ ಫೆ.26 ರ ಭಾನುವಾರ ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸ್ತ್ರಿ ಎಸ್.ನಂದಗಾಂವಿ ಮಠ ಹೇಳಿದರು.
ಶುಕ್ರವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 22 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸ್ಥಾಪನೆಯಾದ ಈ ಸಮಿತಿ ಸಮಾಜಮುಖಿ ಸೇವಾ ಟ್ರಸ್ಟ್ ಆಗಿದೆ. ಇದರಿಂದ ಲಿಂಗಾಯತ ಸಮುದಾಯಕ್ಕೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ಸಮಾಜಕ್ಕೂ ಹಲವಾರು ಕೊಡುಗೆಗಳನ್ನು ಕೊಡುತ್ತಾ ಬಂದಿದ್ದು ಈಗ ರಾಜ್ಯದ 14 ಶಾಖೆಗಳಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಅನುಕೂಲ ಆಗಲಿ ಎಂದು ರಾಜ್ಯಾದ್ಯಂತ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ. ಶಿವಮೊಗ್ಗ, ಸಾಗರ, ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಬೆಳಗಾವಿಗಳಲ್ಲಿಯೂ ಕಾರ್ಯಕ್ರಮ ಮಾಡಿದ್ದೇವೆ. ಇದೀಗ 26ನೇ ತಾರೀಖಿನಂದು ಕೊನೆಯದಾಗಿ ವಿಜಯಪುರದಲ್ಲಿಯೂ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮಕ್ಕೆ ಡಾಕ್ಟರ್ಸ್, ಇಂಜಿನಿಯರ್, ವಾಣಿಜ್ಯೋದ್ಯಮಿಗಳು ಸೇರಿದಂತೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿಯೂ ಓದುವುದರಲ್ಲಿ ಮೊದಲಿದ್ದವರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ : 'ರಾಜಕಾರಣಕ್ಕೆ ದೇವೇಗೌಡರು ಆದರ್ಶ': ವಿದಾಯ ಭಾಷಣದಲ್ಲಿ ಬಿ.ಎಸ್.ಯಡಿಯೂರಪ್ಪ
ಇದುವರೆಗೂ ರಾಜ್ಯಾದ್ಯಂತ ಏಳು ಸಾವಿರ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. 1,300 ಮದುವೆ ಮಾಡಿರುವ ಖ್ಯಾತಿ ಸಂಸ್ಥೆಗಿದೆ. ಕಳೆದ 22 ವರ್ಷಗಳಿಂದ ನಮ್ಮ ಟ್ರಸ್ಟ್ ಶಿವಮೊಗ್ಗದಲ್ಲಿ ಸೇವೆ ಮಾಡುತ್ತಾ ಬಂದಿದೆ. ಸೇವಾ ಟ್ರಸ್ಟ್ನಿಂದ ವಿವಾಹ ಮಾಡಿಸುವುದು ಮಾತ್ರವಲ್ಲದೇ ಬಡವರಿಗೆ ನಿವೇಶನಗಳನ್ನೂ ನೀಡಲಾಗಿದೆ. ಪ್ರತಿಭಾ ಪುರಸ್ಕಾರ, ಸಾಮೂಹಿಕ ಮದುವೆಗಳನ್ನು ಮಾಡಿಸುತ್ತಾ ಬಂದಿದ್ದೇವೆ. ಕೊರೊನಾ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೂ ಕಿಟ್ಗಳನ್ನು ಹಂಚಿದ್ದೇವೆ.
ಇದನ್ನೂ ಓದಿ: ಆಧಾರ ರಹಿತ ಆರೋಪ ಸಿಎಂಗೆ ಶೋಭೆ ತರಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ವಧು-ವರರ ಸಮಾವೇಶದಲ್ಲಿ ಸರ್ಕಾರಿ ನೌಕರರು, ವಾಣಿಜ್ಯೋದ್ಯಮಿಗಳು, ಖಾಸಗಿ ಉದ್ಯಮಿಗಳು ಸೇರಿದಂತೆ ವಿಧವೆ, ವಿಧುರ, ವಿಶೇಷಚೇತನರೂ ಭಾಗವಹಿಸಬಹುದು. ಫೆಬ್ರವರಿ 26ರಂದು ವಿಜಯಪುರದ ಬಂಜಾರ ಹೈಸ್ಕೂಲ್ ಬಳಿಯ ಲಿಂಗಾಯತ ಭವನದಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. www.lingayathweds.com ವೆಬ್ಸೈಟ್ಸ್ ಮೂಲಕ ಮದುವೆ ಸಂಬಂಧಗಳನ್ನು ಬೆಸೆಯುತ್ತಿದೆ. ಆಸಕ್ತರು 08352264130, 876248130 ನಂಬರ್ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಹಾಗೂ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ತೋಟಗಾರಿಕಾ ಇಲಾಖೆ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ