ಮುದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮನೆ ಮನೆಗೆ ಕುಂಕುಮ ಎರಚಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
![outrage-by-the-villagers-against-the-candidates-contesting-the-gram-panchayat-elections](https://etvbharatimages.akamaized.net/etvbharat/prod-images/kn-muddebihal-21-01-gpnews-kac10030_21122020131024_2112f_1608536424_1046.jpg)
ಹಡಲಗೇರಿ ಗ್ರಾಮದ ಎರಡನೇ ವಾರ್ಡ್ನಲ್ಲಿ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಪೈಕಿ ಯಾರಾದರೂ ಹೀಗೆ ಮಾಟ ಮಂತ್ರ ಮಾಡಿಸಿ ಕುಂಕುಮ ಎರಚಿರಬಹುದಾಗಿದ್ದು, ಇದರ ಸತ್ಯ ಬಹಿರಂಗಗೊಳ್ಳಬೇಕು ಎಂದಿರುವ ಗ್ರಾಮಸ್ಥರು, ಏಳೂ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಮತದಾನವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಪಿಎಸ್ಐ ಭೇಟಿ:
ವಿಷಯ ತಿಳಿದ ತಕ್ಷಣ ಹಡಲಗೇರಿ ಗ್ರಾಮಕ್ಕೆ ಪಿಎಸ್ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.