ETV Bharat / state

ಕುರಿ ಸಾಕಣೆದಾರರ ಬಳಿ ಹಣ ವಸೂಲಿಗಿಳಿದಿದ್ದ NGO ವಿರುದ್ಧ ಆಕ್ರೋಶ

author img

By

Published : Feb 2, 2021, 2:58 PM IST

ಮುದ್ದೇಬಿಹಾಳ ತಾಲೂಕಿನಲ್ಲಿ ನಕ್ಷತ್ರ ಕೃಷಿ, ಪಶುಪಾಲನೆ ಹಾಗೂ ತರಬೇತಿ ಸಂಸ್ಥೆಯವರು ಕುರಿ ಸಾಕಣೆದಾರರ ನಂಬಿಸಿ ವಂಚಿಸಲು ಮುಂದಾದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ ಅವರು ತರಬೇತಿ ನೀಡುತ್ತಿದ್ದ ಸಂಸ್ಥೆಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.

muddhebihala
ಶಿವಾನಂದ ಮೇಟಿ

ಮುದ್ದೇಬಿಹಾಳ: ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಸಾಕಾಣಿಕೆಗಾರರು ಇದ್ದು, ಕುರಿ, ಮೇಕೆಗಳೇ ಆರ್ಥಿಕ ಮೂಲವಾಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡ ಜಿಲ್ಲೆಯ ನಕ್ಷತ್ರ ಕೃಷಿ, ಪಶುಪಾಲನೆ ಹಾಗೂ ತರಬೇತಿ ಸಂಸ್ಥೆಯವರು ನಮ್ಮ ಸಂಸ್ಥೆಯ ಪ್ರಮಾಣ ಪತ್ರದಿಂದ ಬ್ಯಾಂಕ್ ಸಾಲ ದೊರೆಯುತ್ತದೆ ಎಂದು ಕುರಿ ಸಾಕಣೆದಾರರಿಗೆ ನಂಬಿಸಿ ವಂಚಿಸಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ

ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜ.31 ರಂದು ಕುರಿ ಸಾಕಾಣಿಕೆಗಾರರಿಗೆ ತರಬೇತಿ ನೀಡಲಾಗುವುದು, ತರಬೇತಿ ಪಡೆದ ಕುರಿ ಸಾಕಾಣಿಕೆಗಾರರಿಗೆ ತರಬೇತಿ ನೀಡಿದ ಸಂಸ್ಥೆಯ ಪ್ರಮಾಣ ಪತ್ರವನ್ನು ಬ್ಯಾಂಕ್​ಗೆ ತೋರಿಸಿದರೆ ತರಬೇತಿ ಪಡೆದುಕೊಂಡವರಿಗೆ ಬ್ಯಾಂಕ್​ನವರು ಸಾಲ ಕೊಡುತ್ತಾರೆ ಎಂದು ನಂಬಿಸಿ ಕುರಿ ಸಾಕಾಣಿಕೆಗಾರರಿಗೆ ತಲಾ 1,000 ರೂ.ಗಳನ್ನು ವಸೂಲಿ ಮಾಡಲಾಗಿತ್ತು. ಇದರ ಸತ್ಯಾಸತ್ಯತೆ ಬಗ್ಗೆ ಕೆಲವು ರೈತರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಇದೊಂದು ಹಣ ಹೊಡೆಯಲು ಮಾಡಿದ ಪ್ಲಾನ್ ಎಂಬುದು ತಿಳಿದು ಬಂದಿದೆ.

muddhebihala
ಕುರಿ ಸಾಕಾಣಿಕೆಗಾರರಿಗೆ ತರಬೇತಿ ನೀಡಿದ ಸಂಸ್ಥೆಯ ಪ್ರಮಾಣ ಪತ್ರ

ಇನ್ನು ಕೂಡಲೇ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ ಅವರು ಸ್ಥಳಕ್ಕೆ ಭೇಟಿ ನೀಡಿ ತರಬೇತಿ ನೀಡುತ್ತಿದ್ದ ಸಂಸ್ಥೆಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ತರಬೇತಿ ನೀಡುವುದಾಗಿ ಹೇಳಿದ್ದ ನಕ್ಷತ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವ್ಯಕ್ತಿಯ ಮೇಲೆ ಅನುಮಾನ ಬಂದಾಗ ಕುಲಂಕೂಷವಾಗಿ ಪರಿಶೀಲನೆ ನಡೆಸಿದ್ದಾರೆ.

ಓದಿ: ಬಾನಂಗಳದಲ್ಲಿ ಲೋಹದ ಹಕ್ಕಿಗಳ ತಾಲೀಮು: 13ನೇ ಆವೃತ್ತಿಯ ಏರ್​ ಶೋಗೆ ಕ್ಷಣಗಣನೆ

ಈ ವೇಳೆ ಅಧಿಕಾರಿ ಶಿವಾನಂದ ಮೇಟಿ ಅವರು ವಸೂಲಿ ಮಾಡಿದ ಅಂದಾಜು 200 ಕುರಿ ಸಾಕಾಣಿಕೆಗಾರರು ತಾವು 1,000 ರೂ ಪ್ರವೇಶ ಶುಲ್ಕ ಕಟ್ಟಿದ್ದ ಹಣವನ್ನು ವಾಪಸ್ ಮಾಡುವಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಗದ್ದಲ ಹೆಚ್ಚುತ್ತಿದ್ದಂತೆ ರೈತರಿಂದ ಪಡೆದ ಹಣವನ್ನು ಅವರಿಗೆ ಸಂಸ್ಥೆಯವರು ವಾಪಸ್ ಮಾಡಿದ್ದಾರೆ.

ಇನ್ನು ಸಂಸ್ಥೆಯ ತರಬೇತುದಾರರನ್ನು ತರಾಟೆಗೆ ತೆಗೆದುಕೊಂಡು ಇನ್ನೊಮ್ಮೆ ತಾಲೂಕಿನಲ್ಲಿ ಈ ರೀತಿಯ ಕಾರ್ಯಕ್ರಮ ಮಾಡದಂತೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.