ETV Bharat / state

ಹೊರ ಜಿಲ್ಲೆಗಳಿಂದ ಬಂದ ಪ್ರಯಾಣಿಕರಿಗೆ ಮುದ್ದೇಬಿಹಾಳ ಬಸ್​ ನಿಲ್ದಾಣದಲ್ಲಿ ತಪಾಸಣೆ

ಬೆಂಗಳೂರು, ಉಡುಪಿ, ಕುಂದಾಪುರ, ಮಂಗಳೂರ ಸೇರಿದಂತೆ ಇತರೆ ಜಿಲ್ಲೆಗಳಿಂದ ಕಾರ್ಮಿಕರು ಹಾಗೂ ಪ್ರಯಾಣಿಕರು ಮುದ್ದೇಬಿಹಾಳಕ್ಕೆ ಆಗಮಿಸಿದರು. ಎಲ್ಲರ ಹೆಸರು ನೋಂದಾಯಿಸಿಕೊಂಡು ಕ್ವಾರಂಟೈನ್ ಮುದ್ರೆ ಹಾಕಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಯಿತು.

Out of state passengers got Quarantine seal at bus stop
ಹೊರರಾಜ್ಯದಿಂದ ಆಗಮಿಸಿದ ಪ್ರಯಾಣಿಕರಿಗೆ ಬಸ್​ ನಿಲ್ದಾಣದಲ್ಲೇ ಕ್ವಾರಂಟೈನ್ ಸೀಲ್​​
author img

By

Published : May 4, 2020, 10:49 PM IST

ಮುದ್ದೇಬಿಹಾಳ: ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಂದ ಆಗಮಿಸುತ್ತಿರುವ ಕಾರ್ಮಿಕರು ಹಾಗೂ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಬಸ್​ ನಿಲ್ದಾಣದಲ್ಲಿ ನಡೆಸಲಾಗುತ್ತಿದೆ. ಬಳಿಕ ಅವರನ್ನು ಹೋಮ್​ ಕ್ವಾರಂಟೈನ್​ನಲ್ಲಿ ಇರುವಂತೆ ಮುದ್ರೆ ಒತ್ತಲಾಗುತ್ತಿದೆ.

ಪಟ್ಟಣದ ಬಸ್ ನಿಲ್ದಾಣಕ್ಕೆ ಸೋಮವಾರ ಬೆಳಗಿನ ಜಾವದಿಂದ ಸಂಜೆಯವರೆಗೆ 12 ಬಸ್‌ಗಳಲ್ಲಿ ಬಂದಿದ್ದ 165ಕ್ಕೂ ಹೆಚ್ಚು ಪ್ರಯಾಣಿಕರ ಹಾಗೂ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ.

ಬೆಂಗಳೂರು, ಉಡುಪಿ, ಕುಂದಾಪುರ, ಮಂಗಳೂರ ಸೇರಿದಂತೆ ಇತರೆ ಜಿಲ್ಲೆಗಳಿಂದ ಪ್ರಯಾಣಿಕರು ಆಗಮಿಸಿದರು. ಎಲ್ಲರ ಹೆಸರು ನೋಂದಾಯಿಸಿಕೊಂಡು ಕ್ವಾರಂಟೈನ್ ಮುದ್ರೆ ಹಾಕಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಯಿತು.

ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರು, ಪುರಸಭೆ ಅಧಿಕಾರಿಗಳು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.