ವಿಜಯಪುರ: ಕಳಪೆ ರಸ್ತೆ ಕಾಮಗಾರಿಗೆ ಕಾರಣೀಭೂತರಾದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳನ್ನು ತಕ್ಷಣ ಅಮಾನತು ಮಾಡಿ ತನಿಕೆ ನಡೆಸುವಂತೆ ಆಗ್ರಹಿಸಿ ವ್ಯಕ್ತಿಯೊಬ್ಬ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಗಾಂಧಿ ಪಥ ಗ್ರಾಮ ಪಥ ಯೋಜನೆ ಅಡಿಯಲ್ಲಿ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗುಡಿಹಾಳ ರಸ್ತೆ ಕಾಮಗಾರಿಯನ್ನು ಕಳೆದ ವರ್ಷ 3.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದ್ರೆ ರಸ್ತೆ ಮಾಡಿದ ಒಂದೇ ವರ್ಷದಲ್ಲಿ ಸಂಪೂರ್ಣ ಹಾಳಾಗಿದೆ. ಕಳಪೆ ಕಾಮಗಾರಿಗೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಕಾರಣರಾಗಿದ್ದಾರೆ. ಅವರನ್ನು ಅಮಾನತು ಮಾಡಿ, ತನಿಕೆ ನಡುಸುವಂತೆ ಆಗ್ರಹಿಸಿ ಗ್ರಾಮೀಣ ರಸ್ತೆ ಅಭಿವೃದ್ಧಿ ಮಂಡಳಿ ಕಚೇರಿ ಮುಂಭಾಗದಲ್ಲಿ ಮಾರುತಿ ಹಿಪ್ಪರಗಿ ಎಂಬವವರು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ.
ಇನ್ನು ಕಳಪೆ ರಸ್ತೆ ಕಾಮಗಾರಿಯಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅದಕ್ಕೆ ಕಾರಣವಾದ ಅಧಿಕಾರಿಗಳನ್ನು ಅಮಾನತು ಮಾಡಿ, ತನಿಕೆ ನಡೆಸಬೇಕು. ಇಲ್ಲವಾದ್ರೆ ಧರಣಿ ಮುಂದುವರೆಸುತ್ತೇನೆ ಎಂದು ಧರಣಿ ನಿರತ ಮಾರುತಿ ಹಿಪ್ಪರಗಿ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದರು.