ವಿಜಯಪುರ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ. ನೇಕಾರ ಕಾಲೋನಿಯ ಕೀರ್ತನಾ ಮಧುಕರ (21) ಆತ್ಮಹತ್ಯೆ ಮಾಡಿಕೊಂಡ ಯುವತಿ.
ವಿಜಯಪುರದ ಬಿಎಲ್ಡಿಇ ನರ್ಸಿಂಗ್ ಕಾಲೇಜ್ನಲ್ಲಿ ಎರಡನೇ ವರ್ಷದ ನರ್ಸಿಂಗ್ ಕೋರ್ಸ್ ಓದುತ್ತಿದ್ದಳು. ಮೊದಲನೇ ವರ್ಷದ ಅಂತಿಮ ಪರೀಕ್ಷೆ ಬರೆದು ಎರಡನೇ ವರ್ಷಕ್ಕೆ ದಾಖಲಾತಿ ಪಡೆದಿದ್ದಳು ಎನ್ನಲಾಗಿದೆ. ಇತ್ತೀಚಿಗೆ ಮೊದಲು ವರ್ಷದ ಅಂತಿಮ ಪರೀಕ್ಷೆಯ ಫಲಿತಾಂಶ ಬಂದಾಗ ನಿರೀಕ್ಷಿಸಿದಷ್ಟು ಅಂಕಗಳು ಬಂದಿರಲಿಲ್ಲ. ಇದರಿಂದ ಮನನೊಂದಿದ್ದ ಕೀರ್ತನಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತಿಸಿದ್ದ ಯುವತಿಗೆ ಮದುವೆ ನಿಶ್ಚಯ: ಫೇಸ್ಬುಕ್ ಲೈವ್ನಲ್ಲಿ ಕಟ್ಟರ್ ಯಂತ್ರದಿಂದ ಕತ್ತು ಕೊಯ್ದುಕೊಂಡ ಪ್ರಿಯಕರ