ETV Bharat / state

FBಯಲ್ಲಿ ಫೋಟೋ ಹಾಕಿದನೆಂದು ಯುವತಿ ಆತ್ಮಹತ್ಯೆ; ಪ್ರಕರಣಕ್ಕೆ ಟ್ವಿಸ್ಟ್ - ಫೇಸ್​ಬುಕ್​ನಲ್ಲಿ ಫೋಟೋ ಅಪ್ಲೋಡ್​ ಮಾಡಿದ್ದಾನೆಂದು ಯುವತಿ ಆತ್ಮಹತ್ಯೆ

ಫೇಸ್​ಬುಕ್​ನಲ್ಲಿ ತನ್ನ ಫೋಟೋ ಅಪ್ಲೋಡ್​ ಮಾಡಿದ್ದಾನೆಂದು ಪ್ರಿಯಕರನ ವರ್ತನೆಗೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ಫೇಸ್​ಬುಕ್​ನಲ್ಲಿ ಫೋಟೋ ಅಪ್ಲೋಡ್
author img

By

Published : Sep 19, 2019, 10:29 PM IST

ವಿಜಯಪುರ: ಫೇಸ್​ಬುಕ್​ನಲ್ಲಿ ತನ್ನ ಫೋಟೋ ಅಪ್ಲೋಡ್​ ಮಾಡಿದ್ದಾನೆಂದು ತನ್ನ ಪ್ರಿಯಕರನ ವರ್ತನೆಗೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಿರುವು ಪಡೆದುಕೊಂಡಿದೆ.

ನಾಪತ್ತೆಯಾಗಿದ್ದಾನೆ ಎನ್ನಲಾದ ಪ್ರಿಯಕರ ಫೇಸ್​ಬುಕ್​ನಲ್ಲಿ ಪ್ರತ್ಯಕ್ಷವಾಗಿದ್ದು, ತನ್ನ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಆಸ್ತಿಯ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ. ಅಷ್ಟೇ ಅಲ್ಲದೇ, ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಆತನ ಕುಟುಂಬ ವರ್ಗದವರಲ್ಲಿ ಆತಂಕ ಸೃಷ್ಟಿಸಿದ್ದಾನೆ.

Facebook
ಫೇಸ್​ಬುಕ್​ನಲ್ಲಿ ಯುವತಿ ಆತ್ಮಹತ್ಯೆ ಕುರಿತು ತಿಳಿಸಿದ ಶಿವಾನಂದ

ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದ ಯುವತಿಯೋರ್ವಳು ಹುಚ್ಚಾಟಕ್ಕೆ ಮನನೊಂದು ಸೀಮೆ ಎಣ್ಣೆ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆಯ ಸಾವಿಗೆ ಪ್ರಿಯಕರ ಶಿವಾನಂದ ಕಾರಣ ಎಂದು ಯುವತಿ ಪೋಷಕರು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಈಗ ಪ್ರೇಮಿ ಶಿವಾನಂದ ಫೇಸ್​ಬುಕ್​ನ ತನ್ನ ಅಕೌಂಟ್‌ನಲ್ಲಿ ಸುದೀರ್ಘ ಪತ್ರ ಬರೆದಿದ್ದಾನೆ.

ಶಿವಾನಂದನ ಪೋಸ್ಟ್‌ನಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು, ಪತ್ತೆಗೆ ಮುಂದಾಗಿದ್ದಾರೆ.

Intro:ವಿಜಯಪುರ Body:ವಿಜಯಪುರ: ಫೇಸ್ ಬುಕ್ ನಲ್ಲಿ ತನ್ನ ಫೋಟೋ ಫೇಸ್ಟ್ ಮಾಡಿದ ಎಂದು ತನ್ನ ಪ್ರಿಯಕರನ ವರ್ತನೆಗೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಬಂದಿದೆ. ನಾಪತ್ತೆಯಾಗಿದ್ದ ಪ್ರಿಯಕರ ಮತ್ತೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿದ್ದು, ತನ್ನ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಕೊಲೆ ನಡೆದಿದ್ದು ಆಸ್ತಿಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ.
ಅಷ್ಟೇ ಅಲ್ಲದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಆತನ ಕುಟುಂಬ ವರ್ಗದವರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದ ಸುಧಾರಾಣಿ ಬಿರಾದಾರ ಪ್ರಿಯಕರ ಶಿವಾನಂದ ಬಿರಾದಾರ ಹುಚ್ಚಾಟಕ್ಕೆ ಮನನೊಂದು ಸೀಮೆಎಣ್ಣೆ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸುಧಾರಾಣಿ ಸಾವಿಗೆ ಶಿವಾನಂದ ಕಾರಣ ಎಂದು ಯುವತಿ ಪೋಷಕರು ಆತನ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆದರೆ ಈಗ ಪ್ರೇಮಿ ಶಿವಾನಂದ ಫೇಸ್ ಬುಕ್ ನ. ಹುಚ್ಚು ಪ್ರೇಮಿ ಎನ್ನುವ ತನ್ನ ಅಕೌಂಟ್ ನಲ್ಲಿ ಸುದೀರ್ಘ. ಪತ್ರ ಬರೆದಿದ್ದು,
ದಯವಿಟ್ಟು ಕ್ಷಮಿಸಿ
ಫೇಸ್ ಬುಕ್ ಪ್ರಚಾರದ ಸಲುವಾಗಿ ನನ್ನ ಹುಡುಗಿ ಸತ್ತಿಲ್ಲಾ
ಅದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಬರೆದ ಶಿವಾನಂದ
ನನ್ನ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುವವಲ್ಲಾ
ಅವಳಿಗೆ ಮನೆಯವರೇ ಟಾರ್ಚರ್ ಮಾಡಿ ಸಾವಿಗೆ ಕಾರಣವಾಗಿದ್ದಾರೆ
ಸಮಾಜದಲ್ಲಿ ಒಳ್ಳೆಯತನಕ್ಕೆ ಬೆಲೆಯಿಲ್ಲಾ
ಆಸ್ತಿ ಅಂತಸ್ತಿನ ಸಲುವಾಗಿ ಪ್ರಾಣ ತೆಗೆದು ಅದನ್ನು ಬೇರೆಯವರ ಮೇಲೆ ಹಾಕ್ತಾರೆ
ಇಂಥ ಸಮಾಜದಲ್ಲಿ ಬದುಕೋಕೆ ಅಸಹ್ಯವಾಗ್ತಿದೆ
ಅದಕ್ಕೆ ನಾನು ನಮ್ಮ ಹುಡುಗಿ ಸಲುವಾಗಿ ಮೇಲೆ ಹೋಗ್ತಿದ್ದೀನಿ
ಅಲ್ಲಿ ಆದರೂ ಅವಳು ನಾನು ನೂರು ವರ್ಷ ಬದುಕಲಿ ಅಂತಾ ಆಶಿರ್ವಾದ ಮಾಡಿ ಎಂದು ಪೋಸ್ಟ್ ಮಾಡಿದ್ದಾನೆ.
ಶಿವಾನಂದ ಪೋಸ್ಟ್ ನಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು
ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ.
ಆತನ ಪತ್ತೆಗೆ ಪೋಷಕರು ಮುಂದಾಗಿದ್ದಾರೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.