ETV Bharat / state

ವಿಜಯಪುರದಲ್ಲಿ ನವರಾತ್ರಿ ಸಿದ್ಧತೆ: ದೇವಿ ಮೂರ್ತಿ ಸಿಂಗಾರದಲ್ಲಿ ತೊಡಗಿದ ಕಲಾವಿದರು - Navratri celebration

ನವರಾತ್ರಿ ಆಚರಣೆಗೆ ದಿನಗಣನೆ ಪ್ರಾರಂಭವಾಗಿದೆ‌. ವಿಜಯಪುರ ನಗರದ ಉಪ್ಪಲಿ ಬುರುಜ್ ಹತ್ತಿರವಿರುವ ಪ್ರಸಿದ್ಧ ಕಲಾವಿದ ಕಾಳೆ ಕುಟುಂಬಸ್ಥರು ದೇವಿ ಮೂರ್ತಿಗಳನ್ನು ತರಹೇವಾರಿ ಬಣ್ಣಗಳ ಮೂಲಕ ಸಿಂಗರಿಸುತ್ತಿದ್ದು, ಫೈನಲ್ ಟಚ್ ​ಅಪ್ ಕೊಡುತ್ತಿದ್ದಾರೆ.

navratri preparations in vijayapura
ದೇವಿ ಮೂರ್ತಿ ಸಿಂಗಾರದಲ್ಲಿ ತೊಡಗಿದ ಕಲಾವಿದರು
author img

By

Published : Sep 24, 2022, 10:34 AM IST

Updated : Sep 24, 2022, 12:11 PM IST

ವಿಜಯಪುರ: ಗಣೇಶ ಚತುರ್ಥಿ ಬಳಿಕ ಬರುವ ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ‌. ಕಳೆದ ಎರಡು ವರ್ಷಗಳಿಂದ ಕೋವಿಡ್​ ಹಿನ್ನೆಲೆ ಸರ್ಕಾರ ನಿರ್ಬಂಧ ವಿಧಿಸಿ ಕೇವಲ ಸಾಂಕೇತಿಕವಾಗಿ ಹಬ್ಬ ಆಚರಿಸಲಾಗಿತ್ತು. ಆದ್ರೆ, ಈ ಬಾರಿ ಯಾವುದೇ ಕಟ್ಟುಪಾಡುಗಳಿಲ್ಲದೆ ಮತ್ತೆ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿದೆ. ಇತ್ತ ಬಸವನಾಡು ವಿಜಯಪುರ ನಗರದಲ್ಲಿ ಸಹ ನವರಾತ್ರಿ ಹಬ್ಬಕ್ಕೆ ಭಕ್ತರು ಸಡಗರಿಂದ ಸಿದ್ಧರಾಗುತ್ತಿದ್ದಾರೆ.

navratri preparations in vijayapura
ದೇವಿ ಮೂರ್ತಿ ಸಿಂಗಾರದಲ್ಲಿ ತೊಡಗಿದ ಕಲಾವಿದರು

ನಾಡ ದೇವಿ, ತುಳಜಾ ಭವಾನಿ, ಚಂಡಿ ಚಾಮುಂಡಿ ಆರಾಧನೆಗೆ ಜನರು ಭಕ್ತಿ ಪೂರ್ವಕವಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ನವರಾತ್ರಿ ಆಚರಣೆ ಹಿನ್ನೆಲೆ ದೇವಿ ಮೂರ್ತಿಗಳಿಗೆ ಫೈನಲ್ ಟಚ್ ಅಪ್ ಮಾಡಲಾಗುತ್ತಿದೆ. ನಗರದ ಉಪ್ಪಲಿ ಬುರುಜ್ ಹತ್ತಿರವಿರುವ ಪ್ರಸಿದ್ಧ ಕಲಾವಿದ ಕಾಳೆ ಕುಟುಂಬಸ್ಥರು ಇದೀಗ ದೇವಿ ಮೂರ್ತಿಗಳನ್ನು ವಿವಿಧ ಬಣ್ಣಗಳ ಮೂಲಕ ಸಿಂಗರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 30ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಲಾಗಿದೆ.

ದೇವಿ ಮೂರ್ತಿ ಸಿಂಗಾರದಲ್ಲಿ ತೊಡಗಿದ ಕಲಾವಿದರು

ಇದನ್ನೂ ಓದಿ: ಮೈಸೂರು ದಸರಾ 2022: ಶ್ರೀರಂಗಪಟ್ಟಣ ದಸರಾಗೆ 5 ಆನೆ

ಕಳೆದ ಕೆಲ ವರ್ಷಗಳ ಹಿಂದೆ ದೇವಿಮೂರ್ತಿಗಳನ್ನು ನೆರೆ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಉಸ್ಮನಾಬಾದ್​ ಮತ್ತಿತರೆ ಸ್ಥಳಗಳಿಗೆ ತೆರಳಿ ಇಲ್ಲಿಯ ನಾಡದೇವಿ ಉತ್ಸವ ಮಂಡಳಿಗಳು ತರುತ್ತಿದ್ದವು.‌ ಆದ್ರೆ, ಇತ್ತೀಚೆಗೆ ಕೆಲ ಕಲಾವಿದರು ಮಹಾರಾಷ್ಟ್ರ ರಾಜ್ಯಕ್ಕಿಂತ ಸುಂದರಮೂರ್ತಿ ತಯಾರಿಸುತ್ತಿರುವುದರಿಂದ ಇಲ್ಲಿಯೇ ಖರೀದಿಸುತ್ತಿದ್ದಾರೆ. ಅಲ್ಲದೇ, ಸಿಂಹಾಸನದ ಮೇಲೆ ಆಸೀನವಾಗಿರುವ, ಸಿಂಹದ ಮೇಲೆ ಸವಾರಿ, ದುಷ್ಟ ರಾಕ್ಷಸನ ಸಂಹಾರ‌ ಮಾಡುತ್ತಿರುವ ಹಾಗೂ ಅಷ್ಟ ಭುಜಗಳನ್ನು ಹೊಂದಿರುವ ದೇವಿ ಮೂರ್ತಿಯನ್ನು ಹೇಳಿ ಮಾಡಿಸುತ್ತಿದ್ದಾರೆ. 3 ರಿಂದ 7 ಅಡಿ ಎತ್ತರದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಇದನ್ನೂ ಓದಿ: ಸೆ. 27 ರಿಂದ 30 ರ ವರೆಗೆ ಚಾಮರಾಜನಗರ ದಸರಾ: ಅದ್ಧೂರಿ ಆಚರಣೆಗೆ ಸಚಿವ ಸೋಮಣ್ಣ ಸೂಚನೆ

Last Updated : Sep 24, 2022, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.