ETV Bharat / state

ನಾರಾಯಣಪುರ ಜಲಾಶಯ ಪ್ರವಾಹ: ವರ್ಷ ಕಳೆದರೂ ಬಂದಿಲ್ಲ ಸರ್ಕಾರದ ಪರಿಹಾರ - vijaypur latest news

ವಿಜಯಪುರ ಜಿಲ್ಲೆ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ನದಿ ಪಾತ್ರದ ಗ್ರಾಮಗಳು ಪ್ರವಾಹ ಎದುರಿಸುವಂತಾಗಿದೆ. ಕೂಡಲೇ ಶಾಶ್ವತ ಸ್ಥಳಾಂತರ ಕಾರ್ಯ ನಡೆಸಬೇಕು. ಕೂಡಲೇ ಪರಿಹಾರದ ಮೊತ್ತ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.

Narayanpur Reservoir Flood in vijaypur
ವರ್ಷ ಕಳೆದರೂ ಬಂದಿಲ್ಲ ಸರ್ಕಾರದ ಪರಿಹಾರ
author img

By

Published : Aug 27, 2020, 6:56 PM IST

ವಿಜಯಪುರ: ಪ್ರತಿ ವರ್ಷದ ಮಳೆಗಾಲಕ್ಕೆ ಈ ಗ್ರಾಮಗಳ ಜನರು ಭಯ ಬೀಳುತ್ತಾರೆ. ಎಲ್ಲಿ ಬೆಳೆದು ನಿಂತ ಫಸಲು ಮತ್ತೇ ನೀರುಪಾಲಾಗುತ್ತದೆಯೋ ಅಥವಾ ಪ್ರವಾಹಕ್ಕೆ ಇದ್ದ ಸೂರು ಕೊಚ್ಚಿ ಹೋಗುವುದೋ ಎಂದು ಆತಂಕದಲ್ಲಿಯೇ ದಿನ ದೂಡುತ್ತಾರೆ.

ವರ್ಷ ಕಳೆದರೂ ಬಂದಿಲ್ಲ ಸರ್ಕಾರದ ಪರಿಹಾರ

ಹೌದು... ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗುವ ಹೊಳೇಮಸೂತಿ ಗ್ರಾಮಸ್ಥರಿಗೆ ನುಂಗಲಾರದ ತುತ್ತು ಇದಾಗಿದೆ. ಶಾಶ್ವತ ಪರಿಹಾರಕ್ಕೆ ಜಾಗವಿಲ್ಲ ಎಂದು ಜಿಲ್ಲಾಡಳಿತ ಸಿದ್ಧ ಉತ್ತರ ನೀಡುತ್ತಲೇ ಬಂದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಇಲ್ಲಿನ ಆಲಮಟ್ಟಿ ಜಲಾಶಯದಿಂದ ಮಳೆಗಾಲದಲ್ಲಿ ಹೆಚ್ಚುವರಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಟ್ಟಾಗ, ಮುದ್ದೇಬಿಹಾಳ ತಾಲೂಕಿನ ಹೊಳೇಮಸೂತಿ, ಯಲ್ಲಮ್ಮನ ಬೂದಿಹಾಳ, ಕಾಶಿನಕುಂಟೆ ಸೇರಿದಂತೆ ಹಲವು ನದಿ ಪಾತ್ರದ ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದರೆ ಸಾಕು ದೂರದ ಈ ಗ್ರಾಮಗಳ ಜನತೆ ನಿದ್ದೆಗೆಡುತ್ತಾರೆ. ಆಲಮಟ್ಟಿ ಜಲಾಶಯ ಭರ್ತಿಯಾಗುವ ಮುನ್ನವೇ ನಾರಾಯಣಪುರ ಹಿನ್ನೀರಿನಿಂದ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುತ್ತದೆ. ಇದರಿಂದ ಬೆಳೆ, ಮನೆ, ಜೀವನವೇ ಜಲಾವೃತಗೊಂಡು ಬದುಕನ್ನು ದುಸ್ತರಗೊಳಿಸುತ್ತದೆ.

ಮನೆ, ಹೊಲ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಲ್ಲ. ಬದಲಾಗಿ ಏನೂ ಕಳೆದುಕೊಳ್ಳದ ಕೆಲ ಪ್ರಭಾವಿಗಳಿಗೆ ಸೌಲಭ್ಯ, ಪರಿಹಾರ ದೊರಕುತ್ತಿದೆ. ಸರ್ಕಾರ ಕೂಡಲೇ ಶಿಸ್ತಿನಕ್ರಮ ತೆಗೆದುಕೊಂಡು, ಫಲಾನುಭವಿಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥ ಪರಸಪ್ಪ ರೂಡಗಿ ಒತ್ತಾಯಿಸಿದರು.

ಕೆಲ ಗ್ರಾಮಗಳಿಗೆ ಪ್ರವಾಹ ಹೆಚ್ಚಿನ ಪ್ರಮಾಣದಲ್ಲಿ ತಟ್ಟದಿದ್ದರೂ ಹೆಚ್ಚುವರಿ ನೀರು ಬಂದಾಗ, ಹೊಲ, ಗದ್ದೆಗಳು ನಾಶವಾಗುತ್ತವೆ. ಕೆಲವು ಮನೆಗಳಿಗೂ ನೀರು ನುಗ್ಗಿದ ಉದಾಹರಣೆಗಳಿವೆ. 2009 ಮತ್ತು 2019ರಲ್ಲಿ ಭಾರಿ ಪ್ರಮಾಣದಲ್ಲಿ ಇಲ್ಲಿ ಪ್ರವಾಹ ಎದುರಾಗಿತ್ತು. 2009ರಲ್ಲಿ ಪ್ರವಾಹ ಬಂದಾಗಲೇ ಗ್ರಾಮ ಸ್ಥಳಾಂತರದ ಚಿಂತನೆ ಮಾಡಲಾಗಿತ್ತು. 2019ರಲ್ಲಿ ಪ್ರವಾಹ ಎದುರಾದಾಗಲೂ ಸಾವಿರಾರು ಎಕರೆ ಕಬ್ಬು, ಸೂರ್ಯಕಾಂತಿ, ತೊಗರಿ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ ಎಂದು ಪ್ರವಾಹ ಸಂತ್ರಸ್ಥ ಕರಿಯಪ್ಪ ಮೇಲಿನಮನಿ ಹೇಳಿದರು.

ಜಿಲ್ಲಾಡಳಿತ, ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ, ಶೀಘ್ರ ಪರಿಹಾರದ ಭರವಸೆ ನೀಡುತ್ತಾರೆ. ಆದರೆ, ಮತ್ತೊಮ್ಮೆ ಈ ವರ್ಷದ ಪ್ರವಾಹಕ್ಕೆ ಬೆಳೆ ನಾಶವಾಗಿದೆ. ಸರ್ಕಾರ ಇನ್ನೂ ಹಿಂದಿನ ವರ್ಷದ ಪರಿಹಾರವನ್ನೇ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಕೂಡಲೇ ಸರ್ಕಾರ ಪರಿಹಾರದ ಜೊತೆಗೆ ಶಾಶ್ವತ ಸ್ಥಳಾಂತರವನ್ನು ವ್ಯವಸ್ಥಿತವಾಗಿ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.