ETV Bharat / state

ಪ್ಯಾಕೇಜ್ ಟೆಂಡರ್‌ನಲ್ಲಿ ಕಾಣದ ಕೈಗಳ ಕೈವಾಡ; ಮಾಜಿ ಸಚಿವ ನಾಡಗೌಡ ಆರೋಪ - ಮುದ್ದೇಬಿಹಾಳ ಟೆಂಡರ್​ ಮೋಸ

ಅಧಿಕಾರಿಗಳು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡಲು ಹೋದರೆ ಸುಮ್ಮನೆ ಕೂರುವುದಿಲ್ಲ. ಪಿಡಬ್ಲೂಡಿ, ಕೆಬಿಜೆಎನ್‌ಎಲ್‌ನಲ್ಲೂ ಅದೇ ರಾಗ. ಎರಡ್ಮೂರು ವರ್ಷಗಳಿಂದ ಬೋರ್ ಕೊರೆದಿಲ್ಲ. ಅದಕ್ಕೂ ಪ್ಯಾಕೇಜ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕೇವಲ ಒಬ್ಬರಿಗೆ ಅನುಕೂಲ ಮಾಡಿಕೊಡಲು ಕಾಣದ ಕೈ ಇದರ ಹಿಂದೆ ಕೆಲಸ ಮಾಡಿದೆ. ಆ ಕೈ ಯಾರದ್ದು ಎಂಬುದು ಬಹಿರಂಗಗೊಳ್ಳಬೇಕು ಎಂದು ಮಾಜಿ ಸಚಿವ ಸಿ.ಎಸ್. ನಾಡಗೌಡ ಅಪ್ಪಾಜಿ ಒತ್ತಾಯಿಸಿದರು.

nadagouda-press-meet-about-cheating-in-tender
ಮಾಜಿ ಸಚಿವ ನಾಡಗೌಡ
author img

By

Published : Apr 25, 2020, 11:45 AM IST

ಮುದ್ದೇಬಿಹಾಳ : ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಎಸ್​ಸಿಪಿ/ಟಿಎಸ್‌ಪಿ ಅನುದಾನವನ್ನು ಪ್ಯಾಕೇಜ್ ರೂಪದಲ್ಲಿ ಟೆಂಡರ್ ಕರೆದು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಎಸ್ಸಿ, ಎಸ್ಟಿ ಜನಾಂಗದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್. ನಾಡಗೌಡ ಅಪ್ಪಾಜಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್​ ಸಿ ಕಾಲನಿಯ ರಸ್ತೆ ಮಾಡಲು ನ್ಯಾಶನಲ್ ಹೈವೇ ಮಾಡುವ ಮಷಿನ್ ಬೇಕಾಗುತ್ತದೆಯೇ. ಯಾರು ರೀ ಅವನು ಎಕ್ಸಿಕ್ಯೂಟಿವ್ ಎಂಜಿನಿಯರ್ ? ಕತ್ತೆ ಕಾಯ್ತಿದ್ದಾನಾ? ಮನುಷ್ಯರಲ್ಲ ಇವ್ರು, ಮನುಷ್ಯ ರೂಪದ ರಾಕ್ಷಸರು. ಯಾರ ಕೈಗೊಂಬೆಯಾಗಿ ಈ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬುದು ಹೊರ ಬರಬೇಕು. ಯಾರೂ ಕೇಳುವವರಿಲ್ಲ ಎಂದು ತಿಳಿದಿದ್ದಾರೋ ಹೇಗೆ? ಎಂದು ನಾಡಗೌಡರು ಆಕ್ರೋಶ ಹೊರಹಾಕಿದರು.

ಪ್ಯಾಕೇಜ್ ಟೆಂಡರ್‌ನಲ್ಲಿ ಕಾಣದ ಕೈಗಳ ಕೈವಾಡ; ಮಾಜಿ ಸಚಿವ ನಾಡಗೌಡ ಆರೋಪ

ಅಧಿಕಾರಿಗಳು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡಲು ಹೋದರೆ ಸುಮ್ಮನೆ ಕೂರುವುದಿಲ್ಲ. ಪಿಡಬ್ಲೂಡಿ, ಕೆಬಿಜೆಎನ್‌ಎಲ್‌ನಲ್ಲೂ ಅದೇ ರಾಗ. ಎರಡ್ಮೂರು ವರ್ಷಗಳಿಂದ ಬೋರ್ ಕೊರೆದಿಲ್ಲ. ಅದಕ್ಕೂ ಪ್ಯಾಕೇಜ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕೇವಲ ಒಬ್ಬರಿಗೆ ಅನುಕೂಲ ಮಾಡಿಕೊಡಲು ಕಾಣದ ಕೈ ಇದರ ಹಿಂದೆ ಕೆಲಸ ಮಾಡಿದೆ. ಆ ಕೈ ಯಾರದ್ದು ಎಂಬುದು ಬಹಿರಂಗಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೇರೆ ಮತಕ್ಷೇತ್ರಗಳಲ್ಲಿ ಈ ರೀತಿ ಆಗಿಲ್ಲ. ಆದರೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಮಾತ್ರ ಹೀಗಾಗಿದೆ. ಕೂಡಲೇ ಟೆಂಡರ್ ಪ್ರಕ್ರಿಯೆ ರದ್ದು ಮಾಡಬೇಕು. ತಪ್ಪಿತಸ್ಥ ಅಧಿಕಾರಿಯ ಮೇಲೆ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳು, ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.