ETV Bharat / state

ಬಿಲ್ ಕೇಳಿದ್ದಕ್ಕೆ ಡಾಬಾ ಮಾಲೀಕನ ಕೊಲೆ: ಆರೋಪಿಗಳ ಬಂಧನ - ಡಾಬಾ ಮಾಲೀಕನನ್ನು ಬರ್ಬರವಾಗಿ ಹತ್ಯೆ

ಕ್ಷುಲ್ಲಕ ಕಾರಣಕ್ಕೆ ಡಾಬಾ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

murder-of-daba-owner
ಕ್ಷುಲಕ ಕಾರಣಕ್ಕೆ ಡಾಬಾ ಮಾಲೀಕನ ಕೊಲೆ
author img

By

Published : Jan 3, 2021, 5:57 PM IST

Updated : Jan 3, 2021, 6:28 PM IST

ವಿಜಯಪುರ: ಹೊಸ ವರ್ಷದ ದಿನದಂದು ಕ್ಷುಲ್ಲಕ ಕಾರಣಕ್ಕೆ ಡಾಬಾ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸಂತೋಷ ಪಾಡುರಂಗ ಬಜಬಳೆ, ಸಂದೀಪ ಯಡವೆ ಹಾಗೂ ದಶರಥ ಯಡವೆ ಎಂದು ಗುರುತಿಸಲಾಗಿದೆ.

ವಿಜಯಪುರ ತಾಲ್ಲೂಕಿನ ತಿಕೋಟಾ ಹೊರವಲಯದ ರತ್ನಾಪೂರ ಕ್ರಾಸ್ ಬಳಿಯಿರುವ ಡಾಬಾದ ಮಾಲೀಕ ಮಹಾದೇವಪ್ಪ ಕೌಲಗಿ ಎಂಬಾತನನ್ನು ಮೂವರು ಆರೋಪಿಗಳು ಹತ್ಯೆಗೈದು ಪರಾರಿಯಾಗಿದ್ದರು.

ನಮ್ಮೂರಿನಲ್ಲಿ ಡಾಬಾ ಇಟ್ಟು, ನಮ್ಮ ಹತ್ತಿರ ದುಡ್ಡು ಇಸ್ಕೊಂತೀಯಾ ಎಂದು ಮಹಾದೇವಪ್ಪನ್ನು ಆರೋಪಿಗಳು ಹತ್ಯೆಗೈದಿದ್ದರು. ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Last Updated : Jan 3, 2021, 6:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.