ETV Bharat / state

ಕೊಲೆ ಆರೋಪಿಗೆ ವಕ್ಕರಿಸಿದ ಕೊರೊನಾ: ಜಲನಗರ ಪೊಲೀಸ್ ಠಾಣೆ ಸೀಲ್​​​ಡೌನ್

ವಿಜಯಪುರದಲ್ಲಿ ಕೊರೊನಾ ಹಾವಳಿ ಮುಂದುವರಿದಿದೆ. ಕೊಲೆಯೊಂದರ ಮೂರನೇ ಆರೋಪಿಗೆ ಕೊರೊನಾ ಸೋಂಕು ದೃಢವಾಗಿದ್ದು ಜಲನಗರ ಪೊಲೀಸ್ ಠಾಣೆಯನ್ನು ಸೀಲ್​​ಡೌನ್​ ಮಾಡಲಾಗಿದೆ. ಅಲ್ಲದೆ ಈತನನ್ನು ಬಂಧಿಸಿದ್ದ ಪಿಎಸ್​​ಐ ಸೇರಿ 6 ಮಂದಿ ಕಾನ್ಸ್​ಟೇಬಲ್​​ಗ​ಳಿಗೂ ಹೋಮ್​​ ಕ್ವಾರಂಟೈನ್ ಮಾಡಲಾಗಿದೆ.

Murder accused got Corona positive: Jalanagar police station Seal down
ಕೊಲೆ ಆರೋಪಿಗೂ ವಕ್ಕರಿಸಿದ ಕೊರೊನಾ: ಜಲನಗರ ಪೊಲೀಸ್ ಠಾಣೆ ಸೀಲ್​​​ಡೌನ್
author img

By

Published : Jul 4, 2020, 12:55 AM IST

ವಿಜಯಪುರ: ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬನಿಗೆ ಕೊರೊನಾ ಸೊಂಕು ತಗುಲಿದ್ದು, ಜಲನಗರ ಪೊಲೀಸ್ ಠಾಣೆ ಸೀಲ್​​ಡೌನ್ ಮಾಡಲಾಗಿದೆ.

ಇತ್ತೀಚಿಗೆ ಯುವತಿಯೊಬ್ಬಳ ವಿಚಾರವಾಗಿ ಯುವಕನೊಬ್ಬನನ್ನು ಆತನ ಜನ್ಮದ ದಿನಕ್ಕೆಂದು ರಾಷ್ಟ್ರೀಯ ಹೆದ್ದಾರಿ ಬಳಿ ಕರೆದುಕೊಂಡು ಹೋಗಿ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪದಲ್ಲಿ ಬಂಧಿಯಾಗಿದ್ದ.

ಜಲನಗರ ಪೊಲೀಸ್ ಠಾಣೆ ಸೀಲ್​​​ಡೌನ್

ಘಟನೆ ನಡೆದು 24 ಗಂಟೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈಗ ಅದೇ ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವ ಮುನ್ನ ಆತನ ಗಂಟಲು ದ್ರವ ಪರೀಕ್ಷೆ ನಡೆಸಿ, ಜೈಲಿನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದರು.

ಈಗ ಆತನ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಆರೋಪಿಯನ್ನು ಬಂಧಿಸಿದ್ದ ಜಲನಗರ ಪಿಎಸ್​​ಐ ಸೇರಿ 6 ಪೊಲೀಸ್ ಕಾನ್ಸ್​​​ಟೇಬಲ್​​​ಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಜಲನಗರ ಪೊಲೀಸ್ ಠಾಣೆ ಸೀಲ್​​ಡೌನ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.