ಮುದ್ದೇಬಿಹಾಳ (ವಿಜಯಪುರ): ಕೋವಿಡ್ ಮೂರನೇ ಅಲೆ ಭೀತಿಯ ಮಧ್ಯೆಯೂ ಇಲ್ಲಿನ ಶ್ರೀ ಬನಶಂಕರಿ ದೇವಿ ರಥೋತ್ಸವ ಸೋಮವಾರ ಸಂಜೆ ನೆರವೇರಿತು.
ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ಜಾತ್ರಾ ಕಮಿಟಿಯವರು ದೇವಿಯ ರಥೋತ್ಸವವನ್ನು ಒಂದು ಗಂಟೆ ಮುಂಚಿತವಾಗಿಯೇ ಎಳೆದರು. ಪ್ರತಿ ವರ್ಷ 6.30ರ ವೇಳೆಗೆ ನಡೆಯುತ್ತಿದ್ದ ರಥೋತ್ಸವವನ್ನು ಈ ಬಾರಿ 5.30ಕ್ಕೆ ನೆರವೇರಿಸಲಾಯಿತು.
ಇದನ್ನೂ ಓದಿ: ಮುದ್ದೇಬಿಹಾಳ: ಮತ್ತೆ ಎಂಟು ವಿದ್ಯಾರ್ಥಿಗಳಿಗೆ ಕೊರೊನಾ.. ಕಸ್ತೂರಬಾ ಶಾಲೆ ಬಂದ್
ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿದರು. ಬನಶಂಕರಿ ದೇವಿ ನಿನ್ನ ಪಾದಕೆ ಶಂಭುಕೋ ಎನ್ನುವ ಘೋಷಣೆಗಳು ದೇವಸ್ಥಾನದ ಆವರಣದಲ್ಲಿ ಕೇಳಿಬಂದವು.
ಮೇಲಿಂದ ಮೇಲೆ ಭಕ್ತರಿಗೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದೇವಸ್ಥಾನದ ಕಮಿಟಿಯವರು ಮೈಕ್‌ನಲ್ಲಿ ತಿಳಿಸಿ ಕೊರೊನಾ ಜಾಗೃತಿ ಮೂಡಿಸಿದರು.