ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಕೊಪ್ಪ ಗ್ರಾಮದ ಬಳಿಯ ಜಾಕ್‌ವೆಲ್‌ನ ಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬುಧವಾರ ಪೊಲೀಸರು, ಪುರಸಭೆ ಸಿಬ್ಬಂದಿ ಸಮ್ಮುಖದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ ಮಾಡಲಾಯಿತು.
ಕಾಲುವೆಯಲ್ಲಿ ಸಿಕ್ಕಿರುವ ವ್ಯಕ್ತಿಯ ವಯಸ್ಸು 40ರಿಂದ 50 ಆಗಿದ್ದು, ಕೆನಾಲ್ ನೀರಿನಲ್ಲಿ ತೇಲಿಕೊಂಡು ಮೃತದೇಹ ಬಂದಿದೆ. ಮೈಮೇಲೆ ಬೂದಿ ಬಣ್ಣದ ಚೌಕ ಗೆರೆಯ ಶರ್ಟ್, ಒಳಗಡೆ ಕೆಂಪು ಬಣ್ಣದ ಟಿ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್, ಕೈಯಲ್ಲಿ ಬಿಳಿದಾರ, ರಾಖಿ ಕಟ್ಟಲಾಗಿತ್ತು. ಸಾಧಾರಣ ದಪ್ಪ ಸಾದಗಪ್ಪು ಬಣ್ಣದ ಚಹರೆ ಹೊಂದಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಮುದ್ದೇಬಿಹಾಳ ಪಿಎಸ್ಐ ಮಲ್ಲಪ್ಪ ಮಡ್ಡಿ ಮಾರ್ಗದರ್ಶನದಲ್ಲಿ ಎಎಸ್‌ಐ ಎನ್.ಎಸ್.ವನಹಳ್ಳಿ, ಸಿಬ್ಬಂದಿ ಮಹಾಂತೇಶ ಕಟ್ಟಿಮನಿ, ಪೊಲೀಸ್ ಕಾನ್ಸ್ಟೇಬಲ್ ಬಿ.ಬಿ.ಚಿಗರಿ ನೇತೃತ್ವದಲ್ಲಿ ಅನಾಥ ಶವಕ್ಕೆ ಅಂತ್ಯಸಂಸ್ಕಾರ ನಡೆಸಲಾಯಿತು.