ETV Bharat / state

ಮುದ್ದೇಬಿಹಾಳ : ಪುರಸಭೆಗೆ ಪ್ರತಿಭಾ ಅಧ್ಯಕ್ಷೆ, ಶಹಜಾದಬಿ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆ - muddebihal municipality election news

ಇಂದು ನಡೆದ ಮುದ್ದೆಬಿಹಾಳ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ,ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಶಹಜಾದಬಿ ಆಯ್ಕೆಗೊಂಡಿದ್ದಾರೆ.ನೂತನ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಜೆಡಿಎಸ್- ಕಾಂಗ್ರೆಸ್​​ ಬೆಂಬಲಿತ ಸದಸ್ಯರು ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು

muddebihal municipality got new president
ಮುದ್ದೇಬಿಹಾಳ
author img

By

Published : Oct 28, 2020, 4:57 PM IST

ಮುದ್ದೇಬಿಹಾಳ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ,ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಶಹಜಾದಬಿ ಹುಣಸಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.

ಮುದ್ದೇಬಿಹಾಳ

ಪುರಸಭೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಚುನಾವಣಾಧಿಕಾರಿ,ತಹಶೀಲ್ದಾರ್ ಜಿ.ಎಸ್.ಮಳಗಿ ಅವಿರೋಧ ಆಯ್ಕೆಯನ್ನು ಘೋಷಿಸಿದರು‌. ಈ ಸಂದರ್ಭದಲ್ಲಿ ಕಾಂಗ್ರೆಸ್​ ,ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಹಾಜರಿದ್ದರು. ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಪ್ರತಿಭಾ ಆಯ್ಕೆಯಾಗಿದ್ದಾರೆ.

ಪುರಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ತಹಶೀಲ್ದಾರ್ ಜಿ.ಎಸ್.ಮಳಗಿ ಪ್ರಕಟಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರತಿಭಾ ಅಂಗಡಗೇರಿ ಅವರಿಗೆ ಪಕ್ಷೇತರ ಸದಸ್ಯ ವೀರೇಶ ಹಡಲಗೇರಿ ಸೂಚಕರಾಗಿ ಸಹಿ ಮಾಡಿದರೆ, ಹನಮಂತ ಭೋವಿ ಅನುಮೋದಕರಾಗಿ ಸಹಿ ಮಾಡಿದರು.ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾದ ಪಕ್ಷೇತರ ಸದಸ್ಯೆ ಶಹಜಾದಬಿ ಹುಣಸಗಿ ಅವರಿಗೆ ಕಾಂಗ್ರೆಸ್ ಸದಸ್ಯ ಅಲ್ಲಾಭಕ್ಷ್ಯ ಢವಳಗಿ ಸೂಚಕರಾಗಿ, ಶಿವಪ್ಪ ಹರಿಜನ ಅನುಮೋದಕರಾಗಿ ಸಹಿ ಮಾಡಿದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಸಹನಾ ಬಡಿಗೇರ ಅವರ ನಾಮಪತ್ರ ತಿರಸ್ಕೃತಗೊಂಡರೆ ಇನ್ನೋರ್ವ ಬಿಜೆಪಿ ಸದಸ್ಯೆ ಸಂಗೀತಾ ದೇವರಳ್ಳಿ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡರು.

ಜೆಡಿಎಸ್- ಕಾಂಗ್ರೆಸ್ ವಿಜಯೋತ್ಸವ:
ನೂತನ ಅಧ್ಯಕ್ಷೆ ಉಪಾಧ್ಯಕ್ಷರಾಗಿ ಜೆಡಿಎಸ್- ಕಾಂಗ್ರೆಸ್​​ ಬೆಂಬಲಿತ ಸದಸ್ಯರು ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಆಯ್ಕೆ ಘೋಷಣೆಗೂ ಮುನ್ನ ಕಾಂಗ್ರೆಸ್​​ ಕಡೆಯವರು ತರಿಸಿದ್ದಾರೆ ಎನ್ನಲಾದ ಡಿಜೆ ಸೌಂಡ್ ಸಿಸ್ಟಮ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.