ETV Bharat / state

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಕಸಿದುಕೊಳ್ಳದಂತೆ ಮನವಿ

ಸಿಎಂ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಇದು ರಾಜ್ಯದ ಮರಾಠ ಸಮುದಾಯಕ್ಕೆ ಆಸರೆಯಾಗಿದೆ..

muddebihal  Maratha community press meet
ಮರಾಠ ಸಮಾಜದ ಮುಖಂಡರ ಸುದ್ದಿಗೋಷ್ಟಿ
author img

By

Published : Nov 25, 2020, 5:47 PM IST

ಮುದ್ದೇಬಿಹಾಳ : ನೂರಾರು ವರ್ಷಗಳಿಂದ ಕನ್ನಡವೇ ಧರ್ಮ ಎಂದು ಜೀವನ ನಡೆಸುತ್ತಿರುವ ರಾಜ್ಯದ ಮರಾಠ ಸಮಾಜದವರ ಏಳಿಗೆಗೆ ಬಿಜೆಪಿ ಸರ್ಕಾರ ಮರಾಠ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಅದನ್ನು ಕಸಿದುಕೊಳ್ಳಬೇಡಿ ಎಂದು ಕ್ಷತ್ರಿಯ ಮರಾಠ ಸಮಾಜದ ತಾಲೂಕಾಧ್ಯಕ್ಷ ಪರಶುರಾಮ ಪವಾರ ಮನವಿ ಮಾಡಿದರು.

ಮರಾಠ ಸಮಾಜದ ಮುಖಂಡರ ಸಭೆ..

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಅನುದಾನವನ್ನು ಘೋಷಿಸಿದ್ದಾರೆ. ಇದು ರಾಜ್ಯದ ಮರಾಠ ಸಮುದಾಯಕ್ಕೆ ಆಸರೆಯಾಗಿದೆ ಎಂದು ಹೇಳಿದರು.

ಮುಖಂಡರಾದ ಅರ್ಜುನ್ ನಲವಡೆ ಮಾತನಾಡಿ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಹಿನ್ನೆಲೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದರು. ಇನ್ನು ಈ ವೇಳೆ ಮುಖಂಡರಾದ ಭರತ್ ಭೋಸಲೆ, ಹಣಮಂತ ನಲವಡೆ, ಶಿವಾಜಿ ಬಿಜಾಪೂರ, ಶರಣು ಬೂದಿಹಾಳಮಠ, ಗಿರೀಶಗೌಡ ಪಾಟೀಲ ಮೊದಲಾದವರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.