ETV Bharat / state

ಸಿಎಂ ವಿರುದ್ಧ ಬೇಕಾಬಿಟ್ಟಿ ಮಾತನಾಡುವವರ ವಿರುದ್ಧ ರಮೇಶ ಜಿಗಜಿಣಗಿ ಆಕ್ರೋಶ! - ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ

ಸಚಿವ ಸಂಪುಟ ವಿಚಾರವಾಗಿ ಕಂಡ ಕಂಡಲ್ಲಿ ಮಾತನಾಡುವುದನ್ನು ಬಿಟ್ಟು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿ ಎಂದು ಬಂಡಾಯ ಶಾಸಕರಿಗೆ ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ramesh
ramesh
author img

By

Published : Jan 15, 2021, 10:57 AM IST

ವಿಜಯಪುರ: ನಾನು ಈ ಹಿಂದೆ ಯಡಿಯೂರಪ್ಪ ಅವರಿಗೆ ಕೆಲವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ, ಆದರೆ ಅವರು ಕೇಳಲಿಲ್ಲ ಎನ್ನುವ ಮೂಲಕ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಪ್ರಸ್ತಾಪಿಸದೇ ವಿಜಯಪುರ ಸಂಸದ ರಮೇಶ ಜಿಗಜಿಣಗಿ ತೀವ್ರ ವಾಗ್ದಾಳಿ ನಡೆಸಿದರು.

ರಮೇಶ ಜಿಗಜಿಣಗಿ ಆಕ್ರೋಶ

ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಾನು ಏನು ಮಾತನಾಡಲು ಬರುವುದಿಲ್ಲ. ಈಗ ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಎಸ್​ವೈ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಸಿಎಂ ಸ್ಥಾನದಲ್ಲಿದ್ದಾರೆ. ಅವರ ಬಗ್ಗೆ ಕೆಲವರು ಹಾದಿ ಬೀದಿಯಲ್ಲಿ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಇದು ಪಕ್ಷದಲ್ಲಿ ಮುಜುಗರ ಉಂಟು ಮಾಡುತ್ತಿದೆ. ಈ ವಿಷಯದ ಕುರಿತು ಕ್ಷೇತ್ರದ ಜನ ಪೋನ್ ಮಾಡಿ ಬೈಯುತ್ತಿದ್ದಾರೆ ಎಂದರು.

ಸಚಿವ ಸಂಪುಟ ವಿಚಾರವಾಗಿ ಕಂಡ ಕಂಡಲ್ಲಿ ಮಾತನಾಡುವುದನ್ನು ಬಿಟ್ಟು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿ ಎನ್ನುವ ಮೂಲಕ ಬಂಡಾಯ ಶಾಸಕರಿಗೆ ಅವರು ಕಿವಿ ಮಾತು ಹೇಳಿದರು. ನನಗೂ ಈಗ ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಹಾದಿ ಬೀದಿಯಲ್ಲಿ ನಾಯಿಯಂತೆ ಬೊಗಳಲು ಆಗುತ್ತಾ? ಎನ್ನುವ ಮೂಲಕ ಸಚಿವ ಸ್ಥಾನದಿಂದ ವಂಚಿತರಿಗೆ ಬಿಸಿ ಮುಟ್ಟಿಸಿದರು. ಸಿಡಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ವಿಚಾರ ನನಗೂ ಗೊತ್ತಿಲ್ಲ ಎಂದರು.

ಒಂದಿಲ್ಲೊಂದು ದಿನ ರಾಜ್ಯದಲ್ಲಿ ದಲಿತ ಸಿಎಂ ಆಗುವುದು ಶತಸಿದ್ಧ ಎಂದು ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು. ಎಡಪಂಥ, ಬಲಪಂಥದವರನ್ನ ಬೇರೆ ಮಾಡಿ ಕೆಲವರು ಮಜಾ ಮಾಡುತ್ತಿದ್ದಾರೆ. ನಾವು ಒಗ್ಗಟ್ಟಾಗಿದ್ದೇವೆ ಎಂದರು.

ಈ ರಾಜ್ಯದಲ್ಲಿರುವ ಎಲ್ಲ ಜಾತಿಗೆ ಸಿಎಂ ಸ್ಥಾನ ಸಿಕ್ಕಿದೆ. ಶೇ 1ರಷ್ಟು, ಶೇ. 2ರಷ್ಟು ಜನಸಂಖ್ಯೆ ಜಾತಿಯವರಿಗೂ ಅವಕಾಶ ದೊರೆತಿದೆ. ದಲಿತರು ಶೇ. 23ರಷ್ಟು ಜನಸಂಖ್ಯೆ ಇದ್ದರೂ ಸಹ ಸಿಎಂ ಸ್ಥಾನ ಸಿಕ್ಕಿಲ್ಲ. ಒಂದಿಲ್ಲೊಂದು ದಿನ ನಾವೂ ಸಿಎಂ ಆಗಿಯೇ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.