ವಿಜಯಪುರ: ನಟರಾದ ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ಹಿಂದಿ ಭಾಷೆ ವಿಚಾರವಾಗಿ ನಡೆದ ಚರ್ಚೆ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಲಘುವಾಗಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾರ ಪರವಾಗಿ ಇರುತ್ತದೋ ಆ ಕಡೆ ನಾವು ಇರಲೇಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಾನು ಬದ್ಧ. ಕೇಂದ್ರ ಹಿಂದಿ ಭಾಷೆ ಪರವಾಗಿದ್ದರೆ ನಾನು ಆ ಕಡೆ, ಅದೇ ಬೇರೆ ಭಾಷೆ ಪರವಾಗಿದ್ದರೆ ಆ ಕಡೆ ಇರುತ್ತೇನೆ. ಭಾಷೆ ವಿಚಾರವಾಗಿ ತಮಿಳುನಾಡು, ಮಹಾರಾಷ್ಟ್ರ ಸೇರಿ ಎಲ್ಲ ರಾಜ್ಯಗಳಲ್ಲಿ ಭಿನ್ನರಾಗವಿದೆ ಎಂದರು.
ಇದನ್ನೂ ಓದಿ: 'ರಾಷ್ಟ್ರೀಯ ಭಾಷೆ ಕುರಿತು ಪದೇ ಪದೇ ಹೇಳಿಕೆ ನೀಡಿದರೆ ಸಾಮರಸ್ಯಕ್ಕೆ ಧಕ್ಕೆ'