ETV Bharat / state

ಸಚಿವ ಕಾರಜೋಳ ಪಾಪದ ಮಂತ್ರಿ: ಎಂಬಿ ಪಾಟೀಲ್ ವ್ಯಂಗ್ಯ

ಮಾಜಿ ಸಚಿವ ಎಂಬಿ ಪಾಟೀಲ್ ​​ಅವರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ವಿಜಯಪುರಲ್ಲಿ ವಾಗ್ದಾಳಿ ನಡೆಸಿದ್ದಾರೆ.

MP Patil
ಎಂಬಿ ಪಾಟೀಲ್
author img

By

Published : Sep 29, 2021, 1:59 PM IST

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕಳೆದ 6 ವರ್ಷದಿಂದ ಸುಳ್ಳು ಹೇಳುತ್ತಿದ್ದಾರೆ. ಇವರು ಪಾಪದ ಬಿಜೆಪಿ ಸರ್ಕಾರದ ಪಾಪದ ಮಂತ್ರಿಯಾಗಿದ್ದಾರೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್​​ ಅವರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಕಿಡಿಕಾರಿದರು.

ಮಾಜಿ ಸಚಿವ ಎಂಬಿ ಪಾಟೀಲ್​​

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಿಜೆಪಿ ಸರ್ಕಾರ ಅನೈತಿಕವಾಗಿ ರಚನೆಯಾಗಿದೆ. ಅದರಲ್ಲಿ ಕಾರಜೋಳ ಪಾಪದ ಮಂತ್ರಿಯಾಗಿದ್ದಾರೆ ಎಂದು ವ್ಯಂಗವಾಡಿದರು.

ಸದನದಲ್ಲಿ ಸಿದ್ದರಾಮಯ್ಯ ಅವರ ಪಂಚೆ ಪುರಾಣ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರವನ್ನು ಟ್ರೋಲ್ ಮಾಡುವುದು ಚಿಲ್ಲರೆ ಕೆಲಸವಾಗಿದೆ. ಸದ್ಯ ಸಿದ್ದರಾಮಯ್ಯ ಅವರಿಗೆ ಆಗಿರಬಹುದು, ಮುಂದೆ ಯಡಿಯೂರಪ್ಪ ಅವರಿಗೂ ಆಗಬಹುದು. ಇದೊಂದು ಕೀಳುಮಟ್ಟದ ಕೆಲಸ, ಯಾರು ಮಾಡಬಾರದು ಎಂದರು.

ಉಪಚುನಾವಣೆಯಲ್ಲಿ ಗೆಲುವು ನಮ್ಮದೆ:

ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಗೆಲವು ನಮ್ಮದೇ. ಸಿಂದಗಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರ ಹೆಸರು ಪ್ರಸ್ತಾಪಿಸಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಸದ್ಯ ಕೆಪಿಸಿಸಿ ಅಧ್ಯಕ್ಷರು ಮರು ಪರಿಶೀಲನೆ ಕುರಿತು ಮಾತನಾಡಿದ್ದಾರೆ.

ಅದರ ಬಗ್ಗೆ ಚಿಂತೆ ಬೇಡ, ಯಾರೆ ಅಭ್ಯರ್ಥಿಗಳಾಗಲಿ ಅವರನ್ನು ಗೆಲ್ಲಿಸುವುದು ಪಕ್ಷದ ಮುಖಂಡರ ಮುಂದಿನ ಗುರಿ ಎಂದರು. ಸಿಂದಗಿ ಚುನಾವಣೆ ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪಾಟೀಲ್​, ಪಕ್ಷದ ತೀರ್ಮಾನ ಎಂದರು.

ಇದನ್ನೂ ಓದಿ: ಒಂದೇ ಕುಟುಂಬದ ಐವರ ಸಾವು: ಪತಿ - ಪತ್ನಿ ನೇಣು, ವಿಷ ಸೇವಿಸಿದ ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.