ETV Bharat / state

ಕೊರೊನಾ ಸೋಂಕಿನಿಂದ ಒಂದೇ ದಿನ ತಾಯಿ-ಮಗ ಸಾವು! - mother and son dies same day

ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೊಂಕಿತ ತಾಯಿ ಹಾಗೂ ಮಗ ಒಂದೇ ದಿನ ಸಾವನ್ನಪ್ಪಿದ್ದಾರೆ.

mother and son dies of corona on same day

author img

By

Published : Apr 28, 2021, 6:52 PM IST

ವಿಜಯಪುರ: ಕೊರೊನಾ ಸೊಂಕಿನಿಂದ 2 ಗಂಟೆ ಅವಧಿಯಲ್ಲಿಯೇ ತಾಯಿ ಮಗ ಬಲಿಯಾದ ಘಟನೆ ವಿಜಯಪುರ ಆಸ್ಪತ್ರೆಯಲ್ಲಿ ನಡೆದಿದೆ. ಸಿಂದಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮತ್ತು ಅವರ ತಾಯಿ ಸಾವನ್ನಪ್ಪಿದ್ದಾರೆ.

ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ತಾಯಿ ಸಾವನ್ನಪ್ಪಿದರೆ, ಸಂಜೆ ಐದು ಗಂಟೆಗೆ ಮಗನ ಸಾವನ್ನಪ್ಪುವ ಮೂಲಕ ತಾಯಿ ಜತೆ ಮಗನೂ ಈಹಲೋಕ‌ ತ್ಯಜಿಸಿದ್ದಾನೆ.

ತಾಯಿ ನಿಂಗಮ್ಮ ಯಲ್ಲಪ್ಪ ಹಿರೇಕುರಬರ (70) ಕೊರೊನಾಗೆ ಬಲಿಯಾಗಿದ್ದು, ಇದಾದ ಎರಡು ಗಂಟೆ ನಂತರ ಸಿಂದಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿರುವ ಮಗ ಅಮೋಘಿ ಹಿರೇಕುರಬರ (46) ಸಾವನ್ನಪ್ಪಿದ್ದಾರೆ.

ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.