ವಿಜಯಪುರ: ಸೀಲ್ ಡೌನ್ ಪ್ರದೇಶದ ಕ್ಲಸ್ಟರ್ ಏರಿಯಾಗಳಲ್ಲಿ ಪೊಲೀಸರು ಡ್ರೋನ್ ಕ್ಯಾಮರಾ ಮೂಲಕ ಸಾರ್ವಜನಿಕರ ಚಲನವಲನ ಗಮನಿಸುತ್ತಿದ್ದಾರೆ.
ನಗರದ ಬಡೆ ಕಮಾನ್ ,ಜುಮ್ಮಾ ಮಸೀದಿ, ಚಪ್ಪರ ಬಂದ್ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಲ್ಲಿ ಡಿಎಸ್‌ಪಿ ಲಕ್ಷ್ಮೀ ನಾರಾಯಣ ಡ್ರೋನ್ ಕ್ಯಾಮರಾದಿಂದ ಸೀಲ್ ಡೌನ್ ಪ್ರದೇಶದಲ್ಲಿ ಸಾರ್ವಜನಿಕ ಓಡಾಟದ ಮೇಲೆ ನಿಗಾ ವಹಿಸಲಾಗಿದ್ದು, ಪ್ರತಿ ದಿನ ಕೊರೊನಾ ಸೋಂಕು ಕಾಣಿಸಿಕೊಂಡ ಪ್ರದೇಶಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದರು. ಕೆಲವು ಜನರು ಕ್ಲಸ್ಟರ್ ಜೋನ್‌ಗಳಲ್ಲಿ ಓಡಾಟ ನಡೆಸುತ್ತಿದ್ದಾರೆ.
ಈ ಮೂಲಕ ಜನರ ಮೇಲೆ ನಿಗಾ ವಹಿಸಿ ರಸ್ತೆ ಮೇಲೆ ಜನರು ತಿರುಗಾಟ ನಡೆಸದಂತೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.