ಮುದ್ದೇಬಿಹಾಳ: ತಾಳಿಕೋಟಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಚಾಲನೆ ನೀಡಿದರು.
ತಾಳಿಕೋಟಿ ಪಟ್ಟಣದಲ್ಲಿ ಪಿಡಬ್ಲ್ಯೂ ಇಲಾಖೆಯಿಂದ 2019-20ನೇ ಸಾಲಿನ ಎಸ್ಎಫ್ಸಿ ಯೋಜನೆಯಡಿ ರಸ್ತೆ ಸುಧಾರಣೆ, ಚರಂಡಿ ನಿರ್ಮಾಣ ಸೇರಿ ಹತ್ತು ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಹೆಚ್ಚುವರಿಯಾಗಿ ತಾಳಿಕೋಟಿ ಪಟ್ಟಣಕ್ಕೆ 25 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಪುರಸಭೆ ಸದಸ್ಯರು ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ಸಿಎಂ ಬಳಿ ಮಾತನಾಡಿ ಮಂಜೂರಾತಿ ಮಾಡಿಸಿಕೊಳ್ಳಲಾಗುವುದು ಎಂದರು.
ಬಳಿಕ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಮಾತನಾಡಿ, ತಾಳಿಕೋಟೆ ಪಟ್ಟಣದೊಳಗೆ ಯಾರಾದರೂ ಕಾಲಿಟ್ಟರೆ ತಿಪ್ಪೆಯಲ್ಲಿ ನಡೆದಂತಾಗುತ್ತಿತ್ತು. ಆದರೆ ಈಗ ಅಭಿವೃದ್ಧಿ ಶಕೆ ಆರಂಭವಾಗಿದೆ. ನಿಮ್ಮ ವಾರ್ಡ್ನಲ್ಲಿ ರಸ್ತೆ ಕಾಮಗಾರಿ ನಡೆಯುವಾಗ ರಸ್ತೆಯ ದಡದಲ್ಲಿ ಪ್ರತಿಯೊಬ್ಬರು 10 ಸಸಿಗಳನ್ನು ನೆಟ್ಟರೆ ಮುಂದಿನ 10 ವರ್ಷಗಳಲ್ಲಿ ಮಕ್ಕಳು, ನಾವು ನಿವೆಲ್ಲಾ ಸ್ವರ್ಗದಲ್ಲಿ ನಡೆದಂತಾಗುತ್ತದೆ ಎಂದರು.