ಮುದ್ದೇಬಿಹಾಳ: ಕೊರೊನಾ ವೈರಸ್ಗೂ ಮನುಷ್ಯರಿಗೂ ಈಗ ಗಂಡ-ಹೆಂಡತಿ ಸಂಬಂಧಂತಿದೆ. ಈ ವೈರಸ್‌ನೊಂದಿಗೆ ನಾವೆಲ್ಲ ಬದುಕು ಸಾಗಿಸಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಕರ್ನಾಟಕ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ಗೌರಿಶಂಕರ ಪುರಾಣಿಕಮಠ ಕುಟುಂಬದವರು ಆಯೋಜಿಸಿದ್ದ, ಕೊರೊನಾ ವಾರಿಯರ್ಸ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುತ್ತಿದ್ದವರು ಈಗ ಜೀವ ಉಳಿಸಿಕೊಳ್ಳಲು ಅದೇ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿಕೊಂಡಿವೆ ಎಂದರು.
ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಮಾತನಾಡಿ, ಕೊರೊನಾ ಹೋಗಲಾಡಿಸಲು ಅಗತ್ಯವಾಗಿರುವ ಸ್ಯಾನಿಟೈಸರ್, ಸಾಬೂನು ಸಾಮಗ್ರಿಯ ಮೇಲೆ ಸರ್ಕಾರ ಸಬ್ಸಿಡಿ ನೀಡಬೇಕು ಎಂದರು.
ಬಸವನ ಬಾಗೇವಾಡಿ ಶಿವಪ್ರಕಾಶ್ ಶಿವಾಚಾರ್ಯರು, ತಹಶೀಲ್ದಾರ್ ಜಿ.ಎಸ್. ಮಳಗಿ, ಜಂಗಮ ಸಮಾಜದ ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.