ETV Bharat / state

ಜನರ ಸಮಸ್ಯೆ ಆಲಿಸಿದ ಶಾಸಕ ನಡಹಳ್ಳಿ - Muddebihala of Vijayapur District

ಬಡವರು ಕಷ್ಟದಲ್ಲಿದ್ದಾಗ ಮಾಡಿದ ಸಹಾಯದ ಪ್ರತಿಫಲವಾಗಿ ನನ್ನನ್ನು ಆಹಾರ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಯಡಿಯೂರಪ್ಪ ನೇಮಕ ಮಾಡಿದ್ದಾರೆ ಎಂದು ಶಾಸಕ ಎ.ಎಸ್.ಪಾಟೀಲ್​ ನಡಹಳ್ಳಿ ಹೇಳಿದ್ದಾರೆ.

ds
ಮಳೆ ನಡುವೆಯೂ ಜನರ ಸಮಸ್ಯೆ ಆಲಿಸಿದ ಶಾಸಕ ನಡಹಳ್ಳಿ
author img

By

Published : Sep 13, 2020, 8:05 AM IST

ಮುದ್ದೇಬಿಹಾಳ : ಸುರಿಯುವ ಮಳೆಯನ್ನು ಲೆಕ್ಕಿಸದೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವ ಶಾಸಕ ಎ.ಎಸ್.ಪಾಟೀಲ್​ ನಡಹಳ್ಳಿ ರಾತ್ರಿ 8 ಗಂಟೆಯವರೆಗೂ ಜನರ ಕುಂದುಕೊರತೆ ಆಲಿಸಿದರು.

ಜನರ ಸಮಸ್ಯೆ ಆಲಿಸಿದ ಶಾಸಕ ನಡಹಳ್ಳಿ

ತಾಲೂಕಿನ ಚಲಮಿ, ಚಲಮಿ ತಾಂಡಾದಲ್ಲಿ ಕೆಬಿಜೆಎನ್ಎಲ್​ ಅಡಿ ಎರಡೂ ಗ್ರಾಮಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಬೇಕಿತ್ತು. ಆದರೆ ಯಲಗೂರ, ಯಲ್ಲಮ್ಮನ ಬೂದಿಹಾಳ, ಕಾಶಿನಕುಂಟೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಚಲಮಿಗೆ ಬರುತ್ತಲೇ ಸಮಯ ಸಂಜೆ 5 ಗಂಟೆಯಾಗಿತ್ತು. ಈ ವೇಳೆ ಮಳೆ ಸುರಿಯುತ್ತಲೇ ಇತ್ತು. ಇದರ ಮಧ್ಯೆ ಶಾಸಕರು ಮೊದಲು ಚಲಮಿ ತಾಂಡಾದ ರಮಣಾದೇವಿ ದೇವಸ್ಥಾನದಲ್ಲಿ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕೃಷಿ ಸಂಬಂಧಿಸಿದಂತೆ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಪಟ್ಟಣ ಪ್ರದೇಶದಲ್ಲಿ ಜಮೀನು ಖರೀದಿಸಲು ಆದ್ಯತೆ ನೀಡಲಾಗಿದೆ. ಬೆಂಗಳೂರು, ಪುಣೆಯಿಂದ ಹಳ್ಳಿಯ ಕಡೆಗೆ ಭೂಮಿ ಖರೀದಿಸಲು ಮುಂದೆ ಬರುತ್ತಿದ್ದಾರೆ. ಕೃಷಿ ಮೂಲದಿಂದ ಉದ್ಯೋಗಗಳನ್ನು ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.