ETV Bharat / state

ಕೇಂದ್ರ ಸಚಿವ ಅಂಗಡಿ, ಶಾಸಕ ನಾರಾಯಣ್‌ರಾವ್ ನಿಧನಕ್ಕೆ ಶಾಸಕ ನಡಹಳ್ಳಿ ಸಂತಾಪ - MLA Nadahalli Patil condolence

ಕೊರೊನಾದಿಂದ ಮೃತರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಹಾಗೂ ಶಾಸಕ ನಾರಾಯಣ ರಾವ್​ ಅವರಿಗೆ ಶಾಸಕ ನಡಹಳ್ಳಿ ಸೇರಿದಂತೆ ಬಿಜೆಪಿ ಸದಸ್ಯರು ಸಂತಾಪ ಸೂಚಿಸಿದರು.

ಮುದ್ದೇಬಿಹಾಳ
ಮುದ್ದೇಬಿಹಾಳ
author img

By

Published : Sep 24, 2020, 8:57 PM IST

ಮುದ್ದೇಬಿಹಾಳ: ಬಸವಕಲ್ಯಾಣ ವಿಧಾನಸಭಾ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನಕ್ಕೆ ಬಿಜೆಪಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾನು ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ. ಪಕ್ಷ ಬೇರೆಯಾಗಿದ್ದರೂ ಅವರೊಬ್ಬ ವಿಧಾನಸಭೆಯ ಸದಸ್ಯರು. ನಾವೆಲ್ಲ ವಿವಿಧ ವಿಷಯಗಳ ಕುರಿತು ಒಟ್ಟಾಗಿ ಚರ್ಚಿಸುವ ಸೌಹಾರ್ದತೆ ಬೆಳೆಸಿಕೊಂಡಿದ್ದೆವು. ಹಿಂದುಳಿದ ವರ್ಗಗಳ ನಾಯಕ ಎಂದೇ ಖ್ಯಾತರಾಗಿದ್ದ ಅವರು ಎಲ್ಲ ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಪೂರ್ಣ ಅಧಿಕಾರ ಅನುಭವಿಸುವುದಕ್ಕೂ ಮುನ್ನವೇ ಇಹಲೋಕ ತ್ಯಜಿಸಿರುವುದು ವಿಷಾದಕರ ಎಂದರು.

ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ : ಕೊರೊನಾ ಸೋಂಕಿನಿಂದ ಅಗಲಿದ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು.

ಬಿಜೆಪಿ ಮಂಡಲದಿಂದ ಶ್ರದ್ಧಾಂಜಲಿ ಸಭೆ :

ಕೊರೊನಾ ವೈರಸ್‌ನಿಂದ ನಿಧನರಾದ ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ಬಿಜೆಪಿ ಮಂಡಲದಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಪಟ್ಟಣದ ರಾಘವೇಂದ್ರ ಮಠದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸರಸ್ವತಿ ಪೀರಾಪೂರ ಮಾತನಾಡಿ, ಅಲ್ಪ ಕಾಲದಲ್ಲಿ ರಾಜ್ಯದಲ್ಲಿ ಹಲವು ರೈಲು ಯೋಜನೆಗಳಿಗೆ ಅನುದಾನ ತಂದುಕೊಡುವಲ್ಲಿ ಸಚಿವ ಅಂಗಡಿ ಅವರು ಶ್ರಮಿಸಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಬಹುದೊಡ್ಡ ಹಾನಿಯಾಗಿದೆ ಎಂದರು.

ಧುರೀಣರಾದ ಮಲಕೇಂದ್ರಗೌಡ ಪಾಟೀಲ, ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಜಿಲ್ಲಾ ಉಪಾಧ್ಯಕ್ಷ ಎಂ.ಡಿ. ಕುಂಬಾರ, ರಾಜಶೇಖರ್​ ಹೂಳಿ, ರವೀಂದ್ರ ಬಿರಾದಾರ, ಬಸಯ್ಯ ನಂದಿಕೇಶ್ವರ ಮಠ, ರಾಜೇಂದ್ರ ರಾಯಗೂಂಡ ಸಭೆಯಲ್ಲಿ ಮೊದಲಾದವರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.