ETV Bharat / state

ಕಂದಕಕ್ಕೆ ಉರುಳಿ ಬಿದ್ದ ಕಾರು: ಶಾಸಕ ನಡಹಳ್ಳಿ ಆಪ್ತ ಸಹಾಯಕ ಪಾರು

author img

By

Published : May 26, 2022, 9:06 PM IST

ಶಾಸಕ ಎ.ಎಸ್​. ಪಾಟೀಲ್​ ನಡಹಳ್ಳಿ ಅವರ ಆಪ್ತ ಸಹಾಯಕನ ಕಾರು ಕಂದಕಕ್ಕೆ ಬಿದ್ದು ಶಿವಾನಂದ ಮೂಲಿಮನಿ ಗಾಯಗೊಂಡ ಘಟನೆ ನಡೆದಿದೆ.

mla-nadahalli-associate-car-fall-into-gorge
ಶಾಸಕ ನಡಹಳ್ಳಿ ಆಪ್ತ ಸಹಾಯಕ ಪಾರು

ಮುದ್ದೇಬಿಹಾಳ: ಶಾಸಕ, ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ್​ ನಡಹಳ್ಳಿ ಅವರ ಆಪ್ತ ಸಹಾಯಕ ಶಿವಾನಂದ ಮೂಲಿಮನಿ ಇದ್ದ ಕಾರು ಅಚಾನಕ್ಕಾಗಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುರುವಾರ ನಡೆದಿದೆ. ಅದೃಷ್ಟವಶಾತ್ ಶಿವಾನಂದ್​ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯ ಆಸ್ಪತ್ರೆಗೆ ಶಿವಾನಂದ್​ ಅವರನ್ನು ದಾಖಲಿಸಲಾಗಿದೆ. ವಿಜಯಪುರದಿಂದ ಮುದ್ದೇಬಿಹಾಳದ ಶಾಸಕರ ಕಚೇರಿಗೆ ಕರ್ತವ್ಯದ ಮೇಲೆ ಕಾರಿನಲ್ಲಿ ಹೊರಟಿದ್ದಾಗ ಮನಗೂಳಿ ಕ್ರಾಸ್‌ನಲ್ಲಿ ಏಕಾಏಕಿ ಎದುರಿಗೆ ಬೈಕ್ ಬಂದಿದ್ದು, ಅದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ತಕ್ಷಣ ಕಾರಿನ ಏರ್‌ಬ್ಯಾಗ್‌ಗಳು ಬಿಚ್ಚಿಕೊಂಡಿದ್ದರಿಂದ ಗಂಭೀರ ಗಾಯವಾಗದೇ, ಅನಾಹುತದಿಂದ ಪಾರಾಗಿದ್ದಾರೆ.

ಓದಿ: ಸಿದ್ಧರಾಮಯ್ಯನವರೇ ನಿಮಗೆ ಎರಡನೇ ಬಾರಿ ಸಿಎಂ ಮಾಡಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.