ETV Bharat / state

ಪ್ರವಾಹ ಪರಿಹಾರದಲ್ಲಿ ವಿಜಯಪುರಕ್ಕೆ ಅನ್ಯಾಯ: ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಎಂ ಬಿ ಪಾಟೀಲ್ - Etv bharat kannada

ನೆರೆ ಹಾವಳಿಯಂತಹ ಗಂಭೀರ ವಿಷಯದಲ್ಲಿಯೂ ಸರ್ಕಾರ ತಾರತಮ್ಯ ತೋರಿದೆ. ಬಿಜೆಪಿ ಸರ್ಕಾರದ ಈ ಭಾಗದ ಮಂತ್ರಿಗಳಿಗೆ ಕಿಂಚಿತ್ತು ಮಾನ, ಮರ್ಯಾದೆ ಇದ್ದರೆ, ಜಿಲ್ಲೆಗೂ ತುರ್ತು ಪರಿಹಾರ ಬಿಡುಗಡೆ ಮಾಡಿಸಬೇಕು ಎಂದು ಶಾಸಕ ಎಂ ಬಿ ಪಾಟೀಲ್ ಆಗ್ರಹಿಸಿದ್ದಾರೆ.

MLA M B Patil warned to bjp government
ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಎಂ ಬಿ ಪಾಟೀಲ್
author img

By

Published : Aug 7, 2022, 5:51 PM IST

ವಿಜಯಪುರ: ಮಳೆಯಿಂದ ನೆರೆ ಉಂಟಾಗಿ ಬೆಳೆ, ಮನೆ ಮತ್ತು ಸಾರ್ವಜನಿಕ ಮೂಲಸೌಲಭ್ಯಕ್ಕೆ ಹಾನಿಯಾಗಿದೆ. ಈ ಕುರಿತು ತುರ್ತು ಪರಿಹಾರ ನೀಡಲು ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 200 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಈ ಅನುದಾನವನ್ನು ಹಂಚಿಕೆ ಸಹ ಮಾಡಲಾಗಿದೆ. ಆದರೆ, ಇದರಲ್ಲಿ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿರುವುದು ಆಶ್ಚರ್ಯ ತಂದಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ ಬಿ ಪಾಟೀಲ್​ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಗೆ ಅಭಿವೃದ್ಧಿ ಕಾರ್ಯಗಳ ಅನುದಾನ ಬಿಡುಗಡೆ ಮಾಡುವಲ್ಲಿ ಸದಾ ತಾರತಮ್ಯ ತೋರುತ್ತಿರುವ ಬಿಜೆಪಿ ಸರ್ಕಾರ, ಇದೀಗ ನೆರೆ ಹಾವಳಿಯಂತಹ ಗಂಭೀರ ವಿಷಯದಲ್ಲಿಯೂ ತಾರತಮ್ಯ ತೋರಿದೆ. ಬಿಜೆಪಿ ಸರ್ಕಾರದ ಈ ಭಾಗದ ಮಂತ್ರಿಗಳಿಗೆ ಕಿಂಚಿತ್ತು ಮಾನ, ಮರ್ಯಾದೆ ಇದ್ದರೆ, ತಕ್ಷಣ ಜಿಲ್ಲಾಧಿಕಾರಿಗಳಿಂದ ಜಿಲ್ಲೆಯಲ್ಲಿ ಮಳೆಯಿಂದ, ನೆರೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆಯಬೇಕು ಎಂದಿದ್ದಾರೆ.

ಅಲ್ಲದೇ ವಿಜಯಪುರ ಜಿಲ್ಲೆಗೂ ತುರ್ತು ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸಂತ್ರಸ್ತರೊಂದಿಗೆ ನಾನೇ ಬೀದಿಗಿಳಿಯಬೇಕಾಗುತ್ತದೆ ಎಂದು ಎಂ.ಬಿ.ಪಾಟೀಲ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಡೋಣಿ ನದಿ ಪ್ರವಾಹ: ಆಂಜನೇಯ ಸ್ವಾಮಿ ದೇಗುಲ ಜಲಾವೃತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.