ETV Bharat / state

ಲಿಂಗಾಯಿತರ ಮೂಲಕ ಬಿಜೆಪಿ ಮುಗಿಸಲು ಕಾಂಗ್ರೆಸ್‌ ಪ್ಲಾನ್‌.. ಶಾಸಕ ಯತ್ನಾಳ್ ಆರೋಪ

ವೀರಶೈವ ಮಹಾಸಭಾ ಕೋಟ ಇಟ್ಟುಕೊಂಡು ಮಂತ್ರಿಯಾಗಲಿಕ್ಕೆ ಉಪಯೋಗ ತೆಗೆದುಕೊಂಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಶಾಮನೂರು ಕಾಣಿಕೆ‌ ಏನು ಇಲ್ಲ. ಯಡಿಯೂರಪ್ಪ ಪರವಾಗಿ ಮಾತನಾಡುವ ನೈತಿಕತೆ ಇವರಿಗಿಲ್ಲ. ಬಿಜೆಪಿ‌ ನಾಯಕ ಬದಲಾವಣೆ ಮಾಡೋದು ಕೇಂದ್ರ ಹೈಕಮಾಂಡ್ ಕೈಯಲ್ಲಿದೆ. ಲಿಂಗಾಯತರ ಮೂಲಕ ಬಿಜೆಪಿಯನ್ನ ಮುಗಿಸೋದಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿದೆ..

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
author img

By

Published : Jul 20, 2021, 4:54 PM IST

ವಿಜಯಪುರ : ಸಚಿವ ಮುರುಗೇಶ ನಿರಾಣಿ ಬಳಿ 500 ರಿಂದ 1000 ಸಿಡಿ ಇವೆ ಎಂದು ಉದ್ಯಮಿ ಆಲಂ ಪಾಷಾ ಗಂಭೀರ ಆರೋಪದ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಆಲಂ ಪಾಷಾ ಆರೋಪ ಕುರಿತು ಸಿಎಂ ಸಿಬಿಐ ತನಿಖೆಗೆ ಆದೇಶ ನೀಡಬೇಕು. ಸಿಡಿ ವಿಚಾರವಾಗಿ ಗಂಭೀರ ಆರೋಪವಿದ್ದರೆ ಅದರಿಂದ ಮುಕ್ತರಾಗಬೇಕು. ಇಲ್ಲವಾದರೆ ಸಚಿವ ಸ್ಥಾನದಲ್ಲಿ ಇರಲು ಹಾಗೂ ಸಿಎಂ ಹುದ್ದೆಗಾಗಿ ದೊಡ್ಡ ಪ್ರಮಾಣದಲ್ಲಿ ಅಮೀಷ ಒಡ್ಡಿದ್ದರ ಕುರಿತು ಹಾಗೂ ದೆಹಲಿಗೆ ಹೋಗುವುದು, ಬರುವುದರ ಕುರಿತು ಮಾಹಿತಿಯಿದೆ ಎಂದರು.

ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆದ ಹೋರಾಟ ಅಸ್ಥಿರಗೊಳಿಸಲು, ವಿಫಲಗೊಳಿಸಲು ಸಚಿವ ನಿರಾಣಿ ಪ್ರಯತ್ನ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದರು. ಇದು ನಾಡಿನ ಜನತೆಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ಸಿಎಂ ಅವರು ಸಿಬಿಐ ತನಿಖೆ ಮಾಡಿಸಬೇಕೆಂದು ಒತ್ತಾಯ ಮಾಡಿದರು. ನಿರಾಣಿ ಕುರಿತು ಇಂಥ ಗುರುತರ ಆರೋಪ ನನ್ನ ಬಳಿಯಿವೆ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ

ಜಿಲ್ಲೆಯಲ್ಲಿ ಮುರುಗೇಶ್​ ನಿರಾಣಿ ಸೌಹಾರ್ದ ಸಹಕಾರಿ ಹೆಸರಲ್ಲಿ ಮೋಸವಾಗಿದೆ. 40 ಕೋಟಿ ರೂಪಾಯಿ ಹಗರಣವಿದೆ. ಸೌಹಾರ್ದ ಸಹಕಾರಿ ನನ್ನದಲ್ಲಾ ಎಂದು ಈಗ ಕೋರ್ಟ್‌ನಿಂದ ಸ್ಟೇ ತೆಗೆದುಕೊಂಡು ಬಂದು ಹೇಳುತ್ತಿದ್ದಾರೆ. ನಿಮ್ಮ ಹೆಸರಲ್ಲಿ ಸೌಹಾರ್ದ ಸಹಕಾರಿ ಬೇಡವೆಂದು ನಿರಾಣಿಗೆ ಹಿಂದೆಯೇ ಹೇಳಿದ್ದೆ. ಆಗ ನನ್ನ ಮಾತು ಕೇಳಲಿಲ್ಲ, ಜಿಲ್ಲೆಯ ಜನರು ಮುರುಗೇಶ ನಿರಾಣಿ ಹೆಸರನ್ನು ನಂಬಿ ಹಣ ಇಟ್ಟಿದ್ದರು. ಈಗ ಸುಮಾರು 40 ಕೋಟಿ ರೂಪಾಯಿ ಹಗರಣವಾಗಿದೆ ಎಂದರು.

ಲಿಂಗಾಯತ ಪರ ವಾದ : ಸಿಎಂ ಪರ ಕಾಂಗ್ರೆಸ್ ಲಿಂಗಾಯತ ನಾಯಕರು ಬ್ಯಾಟಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಕಾಂಗ್ರೆಸ್ ಲಿಂಗಾಯತ ನಾಯಕರು ದಿವಾಳಿಯಾಗಿದ್ದಾರೆ. ಅವರಿಗೆ ಏನು ಕಿಮ್ಮತ್ತಿಲ್ಲ, ಮಂತ್ರಿಯಾಗಬೇಕಾದರೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಕಾಲು ಹಿಡಿದು ಆಗುತ್ತಾರೆ ಎಂದು ಆರೋಪ ಮಾಡಿದರು.

ತಾಕತ್ತಿದ್ದರೆ ಲಿಂಗಾಯತರನ್ನ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು. ಎಂ ಬಿ ಪಾಟೀಲ್​​ರನ್ನಾದ್ರೂ ಸಿಎಂ ಅಭ್ಯರ್ಥಿ ಎಂದು ಮಾಡಲಿ, ಸುಮ್ಮನೆ ಯಡಿಯೂರಪ್ಪ ಬಗ್ಗೆ ಇಷ್ಟೊಂದು ಕಾಳಜಿ, ಪ್ರೀತಿ ಶಾಮನೂರು ಅವರಿಗ್ಯಾಕೆ ಉಕ್ಕಿ ಹರಿಯುತ್ತಿದೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ : ಮುಖ್ಯಮಂತ್ರಿ ಬದಲಾದ್ರೇ ನಾವ್‌ ರೆಡಿ, ನಾವ್‌ ರೆಡಿ ಅಂತಾವ್ರೇ ಧಾರವಾಡಿಗರು.. ಪೇಡೆನಗರಿಯ ಸಿಹಿ ಹೆಚ್ಚುತ್ತಾ!?

ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ವೀರಶೈವ ಮಹಾಸಭಾ ಕೋಟ ಇಟ್ಟುಕೊಂಡು ಮಂತ್ರಿಯಾಗಲಿಕ್ಕೆ ಉಪಯೋಗ ತೆಗೆದುಕೊಂಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಶಾಮನೂರು ಕಾಣಿಕೆ‌ ಏನು ಇಲ್ಲ. ಯಡಿಯೂರಪ್ಪ ಪರವಾಗಿ ಮಾತನಾಡುವ ನೈತಿಕತೆ ಇವರಿಗಿಲ್ಲ. ಬಿಜೆಪಿ‌ ನಾಯಕತ್ವ ಬದಲಾವಣೆ ಮಾಡೋದು ಕೇಂದ್ರ ಹೈಕಮಾಂಡ್ ಕೈಯಲ್ಲಿದೆ. ಲಿಂಗಾಯತರ ಮೂಲಕ ಬಿಜೆಪಿಯನ್ನ ಮುಗಿಸೋದಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿದೆ ಎಂದು ಆರೋಪಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.