ETV Bharat / state

ವಿದ್ಯಾರ್ಥಿನಿ ಎದುರು ನಮ್ರತೆಯಿಂದ ಕ್ಷಮೆಯಾಚಿಸಿದ ಶಾಸಕ ಎ.ಎಸ್.ಪಾಟೀಲ್ - MLA AS Patil nadahalli

ವ್ಯವಸ್ಥೆ ಕೆಲವೊಂದು ಸಾರಿ ನಮ್ಮನ್ನು ಅಸಹಾಯಕರನ್ನಾಗಿಸುತ್ತದೆ. ಗ್ರಾಮೀಣ ಭಾಗದಲ್ಲಿ ಸಂಪೂರ್ಣವಾಗಿ ಸಾರಾಯಿ ಬಂದ್ ಮಾಡಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನಮ್ರತೆಯಿಂದ ವಿದ್ಯಾರ್ಥಿನಿ ಬಳಿ ಕ್ಷಮೆ ಕೋರಿದರು.

MLA AS Patil
MLA AS Patil
author img

By

Published : Oct 6, 2021, 11:23 AM IST

ಮುದ್ದೇಬಿಹಾಳ: ಗ್ರಾಮೀಣ ಭಾಗದಲ್ಲಿ ಸಂಪೂರ್ಣವಾಗಿ ಸಾರಾಯಿ ಬಂದ್ ಮಾಡಿಸಲು ಸಾಧ್ಯವಾಗದಿರುವುದಕ್ಕೆ ವಿದ್ಯಾರ್ಥಿನಿ ಬಳಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕ್ಷಮೆ ಕೋರಿದ ಘಟನೆ ನಡೆಯಿತು.

ಪಟ್ಟಣದ ಪ್ರಾರ್ಥನಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿನಿ ಕುಸುಮಾ ಹೊಕ್ರಾಣಿ, 'ಹಳ್ಳಿಗಳಲ್ಲಿ ಜನರು ಕುಡಿದು ಜಗಳವಾಡುತ್ತಾರೆ. ಇದರಿಂದ ಅಶಾಂತಿಯ ವಾತಾವರಣ ಉಂಟಾಗಿದ್ದು, ಇದನ್ನು ನಿಯಂತ್ರಿಸಲು ನಾನು ಪಿಎಸ್‌ಐ ಆಗುವ ಗುರಿ ಇಟ್ಟುಕೊಂಡಿದ್ದೇನೆ. ಆದರೆ, ಸಾರಾಯಿ ಏಕೆ ಮಾರಾಟ ಮಾಡುವುದನ್ನು ನಿಲ್ಲಿಸುತ್ತಿಲ್ಲ' ಎಂದು ಪ್ರಶ್ನಿಸಿದಳು.

ವಿದ್ಯಾರ್ಥಿನಿ ಎದುರು ಕ್ಷಮೆಯಾಚಿಸಿದ ಶಾಸಕ ಎ.ಎಸ್.ಪಾಟೀಲ್

ಇದಕ್ಕೆ ಶಾಸಕ ನಡಹಳ್ಳಿ ವಾಸ್ತವ ಉತ್ತರ ನೀಡಿದರು. 'ಸಾರಾಯಿ ಅಂಗಡಿ ಇಟ್ಟವರಿಗೆ ಶಿಕ್ಷೆ ವಿಧಿಸಬೇಕು ಎಂದು ಪಿಎಸ್‌ಐ ಆಗಲು ಹೊರಟಿದ್ದೀಯ. ನಿನಗೆ ಯಶಸ್ಸು ಸಿಗಲಿ, ವ್ಯವಸ್ಥೆ ಕೆಲವೊಂದು ಸಾರಿ ನಮ್ಮನ್ನು ಅಸಹಾಯಕರನ್ನಾಗಿಸುತ್ತದೆ. ನಾನು ಅನೇಕ ಹಳ್ಳಿಗಳಿಗೆ ಹೋಗಿದ್ದೇನೆ. ಮೊದಲು ಶಾಸಕನಾಗಿ ಆಯ್ಕೆಯಾದ ಬಳಿಕ ಲೈಸೆನ್ಸ್ ಹೊಂದಿರುವಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಇರಲಿ, ಪ್ರತಿ ಊರಿನಲ್ಲೂ ಸಾರಾಯಿ ಅಂಗಡಿಗಳು ಇರಬಾರದು ಎಂದು ಹೇಳಿದ್ದೆ. ಆದರೆ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ. ಈ ವಿಷಯದಲ್ಲಿ ನಿಮ್ಮ ದೃಷ್ಟಿಯಲ್ಲಿ ನಾನು ಅಪರಾಧಿಯೇ. ಇದಕ್ಕೆ ಕ್ಷಮೆ ಕೋರುತ್ತೇನೆ' ಎಂದರು.

ಈ ವೇಳೆ ವಿದ್ಯಾರ್ಥಿಗಳು ಶಾಸಕರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ಬಳಿಕ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಪೂರೈಸಲು ಕ್ರಮ ಜರುಗಿಸುವಂತೆ ವಿನಂತಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.