ETV Bharat / state

ಗ್ರಾಮೀಣ ಭಾಗದ ಬಸ್ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು: ಶಾಸಕ ನಡಹಳ್ಳಿ - Drive to new buses on the Muddebihala-Kaginale route

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮುದ್ದೇಬಿಹಾಳ-ಕಾಗಿನೆಲೆ ಮಾರ್ಗದಲ್ಲಿ ಸಂಚರಿಸುವ ನೂತನ ಬಸ್​ಗಳಿಗೆ ಚಾಲನೆ ನೀಡಿದರು.

mla-as-patil-nadahalli-drive-to-new-buses-on-the-muddebihala-kaginale-route
ಮುದ್ದೇಬಿಹಾಳ-ಕಾಗಿನೆಲೆ ಮಾರ್ಗ ನೂತನ ಬಸ್​ಗಳಿಗೆ ಚಾಲನೆ
author img

By

Published : Jan 19, 2021, 2:16 PM IST

ಮುದ್ದೇಬಿಹಾಳ (ವಿಜಯಪುರ): ಗ್ರಾಮೀಣ ಭಾಗದ ಬಸ್ ಸಂಚಾರಕ್ಕೆ ಸಾರಿಗೆ ಘಟಕದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸೂಚಿಸಿದ್ದಾರೆ.

ಮುದ್ದೇಬಿಹಾಳ-ಕಾಗಿನೆಲೆ ಮಾರ್ಗ ನೂತನ ಬಸ್​ಗಳಿಗೆ ಚಾಲನೆ

ಮುದ್ದೇಬಿಹಾಳ-ಕಾಗಿನೆಲೆ ಮಾರ್ಗದಲ್ಲಿ ಸಂಚರಿಸುವ ನೂತನ ಬಸ್​ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುದ್ದೇಬಿಹಾಳದಿಂದ ಕಾಗಿನೆಲೆಗೆ ಪ್ರತಿನಿತ್ಯ ಬಸ್‌ ಸಂಚಾರ ಪ್ರಾರಂಭಿಸಬೇಕೆಂಬುದು ನನ್ನ ಹಾಗೂ ಜನರ ಆಶಯವಾಗಿತ್ತು. ಈ ಬಗ್ಗೆ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೆ. ಎಲ್ಲರ ಸಹಕಾರದಲ್ಲಿ ಕೊನೆಗೂ ಬಸ್‌ ಸಂಚಾರಕ್ಕೆ ಅನುಮತಿ ದೊರಕಿದೆ ಎಂದರು.

ಮುದ್ದೇಬಿಹಾಳ ಘಟಕದ ಬಸ್ ತಾಳಿಕೋಟಿ, ಮುದ್ದೇಬಿಹಾಳ, ಕಾಗಿನೆಲೆ ಪ್ರವೇಶಿಸುತ್ತದೆ. ಜನರು ಈ ಬಸ್​ನ ಸಂಚಾರವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಬಸ್​ ತಾಳಿಕೋಟಿಯಿಂದ ಬೆಳಗ್ಗೆ 7:30ಕ್ಕೆ ಹೊರಟು ಮುದ್ದೇಬಿಹಾಳಕ್ಕೆ ಬೆಳಗ್ಗೆ 9ಗಂಟೆಗೆ ಬರಲಿದೆ. ನಂತರ ದನ್ನೂರ, ಅಮಿನಗಡ, ಗುಳೇದಗುಡ್ಡ, ಗದಗ, ಲಕ್ಷ್ಮೇಶ್ವರ, ಬಂಕಾಪುರ, ಹಾವೇರಿ ಮಾರ್ಗವಾಗಿ ಸಂಜೆ 4:30ಕ್ಕೆ ಕಾಗಿನೆಲೆ ತಲುಪುತ್ತದೆ.

ಓದಿ: ಬಾಯ್​​ ಮುಚ್ಚದಿದ್ದರೆ ಯತ್ನಾಳ ಮೇಲೆ ಕೇಂದ್ರ ನಾಯಕರಿಂದ ಸೂಕ್ತ ಕ್ರಮ: ಡಿವಿಎಸ್

ಅದೇ ಬಸ್ ಮಾರನೇ ದಿನ ಕಾಗಿನೆಲೆಯಿಂದ ಬೆಳಗ್ಗೆ 6:30ಕ್ಕೆ‌ ಹೊರಟು ಮುದ್ದೇಬಿಹಾಳ ಪಟ್ಟಣಕ್ಕೆ ಮಧ್ಯಾಹ್ನ 1:30ಕ್ಕೆ ಬರುತ್ತದೆ. ಒಬ್ಬ ಪ್ರಯಾಣಿಕರಿಗೆ 348 ರೂ. ಪ್ರಯಾಣ ದರ ಇದೆ. ಜೊತೆಗೆ ತಾಲೂಕಿನ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತಿ ಹಳ್ಳಿಗೆ ಬಸ್ ಕಲ್ಪಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.