ಮುದ್ದೇಬಿಹಾಳ (ವಿಜಯಪುರ): ಗ್ರಾಮೀಣ ಪ್ರದೇಶಗಳಲ್ಲಿ ಮೊದಲು ಗ್ರಾಮ ಪಂಚಾಯಿತಿ ಸದಸ್ಯರು ಕೊರೊನಾ ಲಸಿಕೆ ಹಾಕಿಸಿಕೊಂಡು ಉಳಿದವರಿಗೆ ಪ್ರೇರಣೆ ನೀಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ ಮುಖಂಡರ ಸಭೆಯಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕುಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ಚರ್ಚೆ ನಡೆಸಿದರು.
ಬಳಿಕ ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜನರನ್ನು ಕರೆತರಲು ಖಾಸಗಿ ಶಾಲೆಯ ವಾಹನಗಳು ಆಯಾ ಹಳ್ಳಿಗಳಿಗೆ ಬರಲಿವೆ. ಚುನಾವಣೆಯಲ್ಲಿ ಮತದಾನದ ಕರ್ತವ್ಯ ಪಾಲಿಸುವ ರೀತಿಯಲ್ಲಿಯೇ ಲಸಿಕೆ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ನಿತ್ಯ 20 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗುತ್ತಿವೆ. ಗಡಿ ಭಾಗದ ಜಿಲ್ಲೆಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಮಹಾರಾಷ್ಟ್ರದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೊರೊನಾ ಲಸಿಕೆ ಪಡೆದುಕೊಳ್ಳಲು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಮಾಧ್ಯಮಗಳು, ಸಾರ್ವಜನಿಕರು ಕೈ ಜೋಡಿಸಿ ಕೊರೊನಾ ವೈರಸ್ ಹೊಡೆದೋಡಿಸಲು ಕಾರ್ಯಪ್ರವೃತ್ತರಾಗೋಣ ಎಂದು ಡಿಎಚ್‌ಒ ಡಾ.ರಾಜಕುಮಾರ ಯರಗಲ್ ಹೇಳಿದರು.
ಇದನ್ನೂ ಓದಿ: ನೌಕರರ ಹಾದಿ ತಪ್ಪಿಸುತ್ತಿರುವ ಕೋಡಿಹಳ್ಳಿ: ಸರ್ಕಾರ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ- ಈಶ್ವರಪ್ಪ ಕಿಡಿ