ETV Bharat / state

ಮಹಾರಾಷ್ಟ್ರದಿಂದ ವಿಜಯಪುರಕ್ಕೆ ವಲಸೆ ಕಾರ್ಮಿಕರ ಆಗಮನ - ವಿಜಯಪುರ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ವಲಸೆ ಕಾರ್ಮಿಕರ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Vijayapura
108 ವಲಸೆ ಕಾರ್ಮಿಕರ ಆಗಮನ
author img

By

Published : Jun 7, 2020, 11:38 AM IST

ವಿಜಯಪುರ: ಮುಂಬೈನಿಂದ ಗದಗಕ್ಕೆ ಬರುವ ರೈಲಿನಲ್ಲಿ ಇವತ್ತೂ ಕೂಡ ಮಹಾರಾಷ್ಟ್ರದಿಂದ 108 ವಲಸೆ ಕಾರ್ಮಿಕರು ಆಗಮಿಸಿದರು.

ಮಹಾರಾಷ್ಟ್ರದಿಂದ ವಿಜಯಪುರಕ್ಕೆ ರೈಲಿನ ಮೂಲಕ ವಲಸೆ ಕಾರ್ಮಿಕರ ಆಗಮನ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ವಲಸೆ ಕಾರ್ಮಿಕರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ ಮಹಾರಾಷ್ಟ್ರದಿಂದ ರೈಲಿನ ಮೂಲಕ ಆಗಮಿಸಿದ ವಲಸೆ ಕಾರ್ಮಿಕರಿಗೆ ವೈದ್ಯಕೀಯ ಸಿಬ್ಬಂದಿ ಸ್ಕ್ರೀನಿಂಗ್ ಟೆಸ್ಟ್​​ ನಡೆಸಿದರು.

ವೈದ್ಯಕೀಯ ಪರೀಕ್ಷೆ​ಯ ಮೂಲಕ ಕಾರ್ಮಿಕರಿಗೆ ಕೊರೊನಾ ಲಕ್ಷಣಗಳಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಬಳಿಕ ಕೆಎಸ್​ಆರ್​​ಟಿಸಿ ಬಸ್‌ ಮೂಲಕ ಕಾರ್ಮಿಕರನ್ನು ತಾಲೂಕುವಾರು ಸಿದ್ಧಪಡಿಸಿರುವ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ.

ಮುಂಬೈ-ಗದಗ ಎಕ್ಸ್​​ಪ್ರೆಸ್ ರೈಲು ಪುನರಾರಂಭಗೊಂಡು ಇಂದಿಗೆ 6ನೇ ದಿನವಾಗಿದೆ. ಮೊದಲ ದಿನ 212 ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದರು. ಈಗ ಮಹಾರಾಷ್ಟ್ರದಿಂದ ಬರುವ ಕಾರ್ಮಿಕರ ಸಂಖ್ಯೆ ನಿತ್ಯ ಕಡಿಮೆಯಾಗುತ್ತಿದ್ದು ಜಿಲ್ಲಾಡಳಿತ ನಿಟ್ಟುಸಿರುಬಿಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.