ETV Bharat / state

ಕೊರೊನಾ ನಮಗೆ ಬದುಕು ಕಲಿಸಿದೆ: ವಿದೇಶಿ ಕನ್ನಡಿಗರೊಂದಿಗೆ ಎಂಬಿಪಾ ಸಂವಾದ

author img

By

Published : Jun 1, 2020, 1:05 PM IST

ಕನ್ನಡ ನಾಡಿಗೆ ಸೀಮಿತವಾಗಿದ್ದ ಬಸವಣ್ಣನನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಕೀರ್ತಿ ತಮ್ಮದು. ತಾವು ಸಹ ಸೋಂಕಿತರಾಗಿ ಚೇತರಿಸಿಕೊಂಡು ಪುನಃ ವೈದ್ಯರಾಗಿ ಸೇವೆಗೆ ಮರಳಿರುವುದು ಸಂತಸ ತಂದಿದೆ ಎಂದು ಲಂಡನ್ ನಗರದ ವೈದ್ಯ ಡಾ.ನೀರಜ್ ಪಾಟೀಲ್ ಕುರಿತು ಮಾಜಿ ಸಚಿವ ಎಂ.ಬಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದರು.

M.B. Patil's  conversation with foreign Kannadigas
ವಿದೇಶಿ ಕನ್ನಡಿಗರೊಂದಿಗಿನ ಸಂವಾದದಲ್ಲಿ ಎಂ.ಬಿ.ಪಾಟೀಲ್​​ ಮನದ ಮಾತು

ವಿಜಯಪುರ: ಕೊರೊನಾ ನಮಗೆ ಬದುಕು ಕಲಿಸಿದೆ. ಮುಂದಿನ ನಮ್ಮ ಬದುಕು ಹೇಗೆ ಇರಬೇಕು ಎಂಬ ದಿಕ್ಸೂಚಿ ಲಾಕ್‍ಡೌನ್ ಅವಧಿಯಲ್ಲಿ ನಮಗೆ ದೊರೆತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್​​ ಸಾಗರೋತ್ತರ ಕನ್ನಡಿಗರೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಹೇಳಿದ್ದಾರೆ.

ಕೊರೊನಾ ಸಂಕಷ್ಟದ ಹಿನ್ನೆಲೆ ಸಾಗರೋತ್ತರ ಕನ್ನಡಿಗರು ಮಾಜಿ ಸಚಿವ ಎಂ.ಬಿ.ಪಾಟೀಲ‍ರೊಂದಿಗೆ ಸಂವಾದ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಲಂಡನ್ ನಗರದ ವೈದ್ಯ ಡಾ.ನೀರಜ್ ಪಾಟೀಲ್, ನಾವೆಲ್ಲರೂ ಎಲ್ಲೇ ಇದ್ದರೂ ಸಹ, ಬಸವ ಭಕ್ತರಾಗಿದ್ದೇವೆ, ಕೊರೊನಾ ಸಂಕಟದಲ್ಲಿ ಬಸವ ತತ್ವದ ಪ್ರಸಕ್ತತೆಗೆ ಹೆಚ್ಚು ಮಹತ್ವವಿದೆ. ಕಾಯಕ ಮತ್ತು ದಾಸೋಹ ನಮಗೆ ಈ ಸಂಕಟದ ಸಮಯದಲ್ಲಿ ಹೆಚ್ಚು ನೆರವಿಗೆ ಬರಲಿದೆ ಎಂದು ತಿಳಿಸಿದರು.

ನಂತರ ಮಾತನಾಡಿ, ಎಂ.ಬಿ.ಪಾಟೀಲ್ ಅವರು ನಮ್ಮ ಜೊತೆ ಈ ಕಾನ್ಫರೆನ್ಸ್​​​​​​ನಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಅವರಂತೆ ಎಂ.ಬಿ.ಪಾಟೀಲ್ ಅವರ ಬಸವಾಭಿಮಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಇದಕ್ಕೆ ಪ್ರತ್ಯುತ್ತರಿಸಿದ ಎಂ.ಬಿ.ಪಾಟೀಲ್​​ ಕನ್ನಡ ನಾಡಿಗೆ ಸೀಮಿತವಾಗಿದ್ದ ಬಸವಣ್ಣನನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಕೀರ್ತಿ ತಮ್ಮದು. ತಾವು ಸಹ ಸೋಂಕಿತರಾಗಿ ಚೇತರಿಸಿಕೊಂಡು ಪುನಃ ವೈದ್ಯರಾಗಿ ಸೇವೆಗೆ ಮರಳಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಮೆರಿಕದ ನ್ಯೂಯಾರ್ಕ್​ ನಗರದಿಂದ ಕಲಬುರಗಿಯ ಬಸವಪ್ರಭು ಪಾಟೀಲ್ ಅವರು ಮಾತನಾಡಿ, ನಮಗೆ ಈ ಕಾರ್ಯಕ್ರಮ ಇದೆ ಅನ್ನೋದು ಗೊತ್ತಾಗಿ ನಾನು ಇಲ್ಲಿ ಭಾಗವಹಿಸಿದ್ದೇನೆ, ನಾನು ಚಿಕ್ಕದಿಂನಿಂದಲೂ ಲಿಂಗ ಪೂಜೆ ಮಾಡುತ್ತಾ ಬೆಳೆದವರು, ಎಂ.ಬಿ.ಪಾಟೀಲ ಅವರು ಮಾಡಿರುವ ಕಾರ್ಯಗಳು ನಮಗೆ ಸ್ಪೂರ್ತಿ ಯಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವು ಮುಂಬೈನಲ್ಲಿ ಎದುರುಸುತ್ತಿರುವ ಕೊರೊನಾ ಸಂಕಷ್ಟವನ್ನು ನೀವು ಅಮೆರಿಕದಲ್ಲಿ ವಿಶೇಷವಾಗಿ ನ್ಯೂಯಾರ್ಕ್​ನಲ್ಲಿ ಎದುರಿಸುತ್ತಿದ್ದೀರಿ, ಸಾಧ್ಯವಾದಷ್ಟು ಅಲ್ಲಿನ ಕನ್ನಡಿಗರಿಗೆ ನೆರವಾಗಿ. ಅಲ್ಲದೇ ಬಸವಣ್ಣನವರು ನಮ್ಮ ಅಸ್ಮಿತೆಯಾಗಿದ್ದಾರೆ. ಅಣ್ಣ ಬಸವಣ್ಣನವರು ನಮ್ಮ ಹೃದಯಕ್ಕೆ ಹತ್ತಿರವಾದವರು, ಬಸವಣ್ಣನವರ ಕಾಯಕ ಧರ್ಮವನ್ನು ನಾವೆಲ್ಲರೂ ಪಾಲಿಸೋಣ ಎಂದು ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.