ವಿಜಯಪುರ: ಅಕ್ರಮವಾಗಿ ತಂಬಾಕು ಮಿಶ್ರಿತ ಮಾವಾ ತಯಾರಿಸುತ್ತಿದ್ದ ಶೆಡ್ ಮೇಲೆ ದಾಳಿ ನಡೆಸಿರುವ ಪೊಲೀಸರು 3.87.300 ಲಕ್ಷ ರೂ. ಮೌಲ್ಯದ ಕಚ್ಚಾ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಚಡಚಣ ಪಟ್ಟಣದ ಹುಸೇನಸಾಬ್ ನದಾಫ್, ಗಣೇಶ ಮೋರೆ ಬಂಡು ಬುರುಡ, ಹಾವಿನಾಳ ಗ್ರಾಮದ ಪರಶುರಾಮ ವಾಘಮೋರೆ, ಚಡಚಣದ ರಾಜು ವಾಘಮೋರೆ, ಗೌಸ ಕಾಮಲೆ ಹಾಗೂ ಶಂಕರ ಬುರುಡ ಎಂದು ಗುರುತಿಸಲಾಗಿದೆ. ಆರೋಪಿಗಳು ಚಡಚಣ ಪಟ್ಟಣದ ಖೂಬಾ ಮಸೀದಿ ಬಳಿಯ ಶೆಡ್ನಲ್ಲಿ ಸುಣ್ಣದ ನೀರು, ತಂಬಾಕು ಹಾಗೂ ಅಡಕೆ ಚೂರು ಬಳಸಿ ಯಂತ್ರದ ಮೂಲಕ ಕಲಬೆರಿಕೆ ಮಾವಾ ತಯಾರಿಸಿ ಮಾರಾಟ ಮಾಡುತ್ತಿದ್ದರು.
ಮಾಹಿತಿ ಪಡೆದ ಚಡಚಣ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳಿಂದ 3ಲಕ್ಷ ರೂ. ಬೆಲೆ ಬಾಳುವ 30 ಕೆ.ಜಿ 50 ಚೀಲ ಅಡಿಕೆ ಚೂರು, 33 ಸಾವಿರ ಮೌಲ್ಯದ 10 ಕೆ.ಜಿ ಸುಣ್ಣ ಸೇರಿ ತಂಬಾಕು ಚೀಟುಗಳು, ಮಾವಾ ಪಾಕೇಟ್, ಮಾವಾ ತಯಾರಿಸುವ ಯಂತ್ರ, 6 ಮೊಬೈಲ್ ಸೇರಿ 3.87.300 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.