ವಿಜಯಪುರ: ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಬಿಎಲ್ಡಿ ಆಸ್ಪತ್ರೆ ಬಳಿಯ ಕಟ್ಟಡದಲ್ಲಿ ನಡೆದಿದೆ.
ಮಾಳು ರಾವುತಪ್ಪ ಸಮಗೊಂಡ (37) ಸಾವಿಗೆ ಶರಣಾದ ವ್ಯಕ್ತಿ. ಈತ ಹೋಟೆಲ್ ಒಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.