ವಿಜಯಪುರ: ಲಾಕ್ಡೌನ್ ಹಿನ್ನೆಲೆ ಹಸುಗೂಸಿನೊಂದಿಗೆ ಬಾಣಂತಿ ಪರದಾಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿಯ ನೀಲಾಂಬಿಕಾ ದೇವಸ್ಥಾನದ ಬಳಿಯ ಚೆಕ್ ಪೋಸ್ಟ್ ಬಳಿ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಕಪನೂರ ಗ್ರಾಮದ ಮಹಿಳೆಗೆ ಇಳಕಲ್ನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಹೆರಿಗೆಯಾಗಿತ್ತು. ಚೆಕ್ ಪೋಸ್ಟ್ನಲ್ಲಿ ತೆಂಗಿನಕಾಯಿ ತುಂಬಿದ್ದ ತಮಿಳುನಾಡು ಮೂಲದ ಲಾರಿ ಸಿಕ್ಕಿ ಹಾಕಿಕೊಂಡಿದ್ದು, ರಸ್ತೆ ಇಲ್ಲದೆ ಮುಂದೆ ಹೋಗಲು ತೊಂದರೆಯಾಗಿತ್ತು. ನಾಲ್ಕು ದಿನದ ಹಸುಗೂಸಿನೊಂದಿಗೆ ಸೇತುವೆ ಮೇಲೆ ನಡೆದುಕೊಂಡು ಬಾಣಂತಿ ಬಂದಿದ್ದಳು.
ಬಾಣಂತಿ ಸೌಮ್ಯಾ ಮಲ್ಲಯ್ಯ ಹಿರೇಮಠ ಹಾಗೂ ಹಸುಗೂಸಿಗೆ ನೀಲಾಂಬಿಕಾ ಗುಡಿಯಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿತ್ತು. ತಂಗಡಗಿಯಿಂದ ಕಪನೂರಿಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೆ ತಾಯಿ-ಮಗು ಪರದಾಡಬೇಕಾಯಿತು. ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಿಸಿದ ನಂತರ ಆರೋಗ್ಯ ಕವಚ ಆಂಬ್ಯುಲೆನ್ಸ್ನಲ್ಲಿ ಬಾಣಂತಿ, ಮಗುವನ್ನು ಸುರಕ್ಷಿತವಾಗಿ ತಲುಪಿಸಲಾಯಿತು.