ETV Bharat / state

ವಿಜಯಪುರ: ನಿಲಯ ಪಾಲಕರ ನೇಮಕಾತಿ ಆದೇಶ ಹೊರಡಿಸುವಂತೆ ಮನವಿ ಸಲ್ಲಿಕೆ

ವಸತಿ ಶಾಲೆಗಳ ನಿಲಯ ಪಾಲಕರ ಹುದ್ದೆ ಭರ್ತಿಗೆ ಆದೇಶ ಹೊರಡಿಸುವಂತೆ ಕೋರಿ ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

manavi
manavi
author img

By

Published : Jul 15, 2020, 4:32 PM IST

ವಿಜಯಪುರ: ದಾಖಲೆ ಪರಿಶೀಲನೆ ನಡೆದು ವಸತಿ ಶಾಲೆಗಳ ನಿಲಯ ಪಾಲಕರ ಹುದ್ದೆಗೆ ಆದೇಶ ನೀಡುವಂತೆ ಕೋರಿ ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾಧಿಕಾರಿಗೆ ಇಂದು ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ವಸತಿ ಶಿಕ್ಷಣ ವ್ಯಾಪ್ತಿಯಲ್ಲಿ 2017ರಲ್ಲಿ ಪರೀಕ್ಷೆ ಬರೆಯಲಾಗಿತ್ತು. ಬಳಿಕ ದಾಖಲೆ ಪರಿಶೀಲನೆ ನಂತರ ಅಂತಿಮ‌ ಪಟ್ಟಿಯನ್ನು ಕೆಆರ್‌ಇಎಸ್​ಗೆ ಸಲ್ಲಿಸಿದರು.

ಸೇವಾ ಆದೇಶ ಪ್ರತಿ ಹೊರಡಿಸುವಂತೆ ಮನವಿ ಸಲ್ಲಿಕೆ

ಸ್ಥಳ ನಿಗದಿ ಹಾಗೂ ಆದೇಶದ ಪ್ರತಿ ನೀಡುತ್ತಿಲ್ಲ. ಅಧಿಸೂಚನೆಯಲ್ಲಿ ನೇಮಕವಾದ ಶಿಕ್ಷಕರು ಈಗಾಗಲೇ ಸೇವೆ ಆರಂಭಿಸಿದ್ದಾರೆ. ವಾರ್ಡ್‌ನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಬಡವರಾಗಿದ್ದು, ಸರ್ಕಾರ ಮಾತ್ರ ಆದೇಶ ಪಟ್ಟಿ ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ 51 ಅಭ್ಯರ್ಥಿಗಳಿಗೆ ಸರ್ಕಾರ ಕೆಲಸದ ಸ್ಥಳದ ಬಗ್ಗೆ ಆದೇಶ ನೀಡುತ್ತಿಲ್ಲ. ನಮ್ಮ ಜೊತೆಗೆ ಆಯ್ಕೆಯಾದ ಶಿಕ್ಷಕರು ಕಳೆದ 7 ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದಾರೆ‌. ನಮ್ಗೂ ನ್ಯಾಯ ಒದಗಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಮಂಜುನಾಥ ಎಂಬುವರು ಈಟಿವಿ ಭಾರತ ಮೂಲಕ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.