ETV Bharat / state

ಎಸ್​​ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ಪತ್ರ ಚಳುವಳಿ - vijayapura news

ತಳವಾರ ಮತ್ತು ಪರಿವಾರ ಸೇವಾ ಸಮಿತಿ ಕಾರ್ಯಕರ್ತರು ಸಿಎಂ ಬಿಎಸ್‌ವೈ ಅವರಿಗೆ ಪತ್ರಗಳನ್ನು ಪೋಸ್ಟ್ ಮೂಲಕ ಪತ್ರ ಚಳುವಳಿ ನಡೆಸಿದರು.

letter protest in vijayapura
ಎಸ್​​ಟಿ ಪ್ರಮಾಣ ನೀಡುವಂತೆ ಪತ್ರ ಚಳುವಳಿ : ಪ್ರತಿಭಟನಾಕಾರರಿಂದ ಸಿಎಂಗೆ ಪೋಸ್ಟ್​​​
author img

By

Published : Oct 8, 2020, 5:00 PM IST

ವಿಜಯಪುರ : ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ತಳವಾರ ಮತ್ತು ಪರಿವಾರ ಸೇವಾ ಸಮಿತಿ ಕಾರ್ಯಕರ್ತರು ಪತ್ರ ಚಳುವಳಿ ನಡೆಸಿದ್ರು.

ಎಸ್​​ಟಿ ಪ್ರಮಾಣ ಪತ್ರ ನೀಡುವಂತೆ ಪತ್ರ ಚಳುವಳಿ

ನಗರದ ಗಾಂಧಿ ಚೌಕ್ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಮುಂಭಾಗ ಸೇರಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು.‌ ಕೆಲವು ರಾಜಕಾರಣಿಗಳ ಕುತಂತ್ರದಿಂದ ಎಸ್‌ಟಿ ಪಟ್ಟಿಗೆ ಸೇರಿದ ಪರಿವಾರ ಮತ್ತು ತಳವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ಹಿನ್ನಡೆ ಆಗುತ್ತಿದೆ. ಅಧಿಕೃತವಾಗಿ ಪ್ರಮಾಣ ಪತ್ರ ವಿತರಣೆ ಮಾಡುವಂತೆ ಹಲವು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದರೂ, ರಾಜ್ಯ ಸರಕಾರ ಮಾತ್ರ ಕುರುಡುತನ ಪ್ರದರ್ಶನ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.