ETV Bharat / state

ವಿಜಯಪುರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ : ಸಮರ್ಪಕವಾಗಿ ಜರುಗುತ್ತಿಲ್ಲ ಕಸ ವಿಲೇವಾರಿ - ವಿಜಯಪುರ ಜಿಲ್ಲೆ ಸುದ್ದಿ

ಸ್ವಚ್ಛತೆ ಕಾರ್ಯ, ತ್ಯಾಜ್ಯ ವಿಲೇವಾರಿ ಸೇರಿದಂತೆ ಪ್ರತಿ ಹಂತದ ಕೆಲಸ ಕಾರ್ಯವನ್ನು ಅಧಿಕಾರಿಗಳು ಮುಂದೆ ನಿಂತು ಮಾಡಬೇಕಾಗುತ್ತದೆ. ಆದರೆ, ಸಿಬ್ಬಂದಿ ಕೊರತೆಯಿಂದ‌ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ‌‌ ಎಂಬ ದೂರುಗಳಿವೆ..

Vijayapura Mahanagar Palike
ವಿಜಯಪುರ ಮಹಾನಗರ ಪಾಲಿಕೆ
author img

By

Published : Nov 23, 2020, 8:00 PM IST

Updated : Nov 23, 2020, 9:57 PM IST

ವಿಜಯಪುರ: ನಗರದಲ್ಲಿ ರಸ್ತೆ ಅಭಿವೃದ್ಧಿ, ಒಳಚರಂಡಿ, ಕಸವಿಲೇವಾರಿ ಸಮರ್ಪಕವಾಗಿ ಜರುಗುತ್ತಿಲ್ಲ ಎಂದು ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಆರೋಪಗಳಿಗೆ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯೇ ಅದಕ್ಕೆ ಉತ್ತರ ಎನ್ನಲಾಗಿದೆ. ಹೀಗಾಗಿ, ಹಲವು ಕಾಮಗಾರಿಗಳು ನಿಗದಿತ ಕಾಲಕ್ಕೆ ಕೊನೆಗೊಳ್ಳುತ್ತಿಲ್ಲ ಮತ್ತು ಅಭಿವೃದ್ಧಿಗೂ ಹಿನ್ನಡೆ ಉಂಟಾಗುತ್ತಿದೆ ಎನ್ನಲಾಗಿದೆ.

ವಿಶ್ವಖ್ಯಾತ ಗೋಲ್ ಗುಂಬಜ್ ಸ್ಮಾರಕ ಇರುವ ನಗರ ರಸ್ತೆಗಳು ಹಾಳಾಗಿವೆ. ಸ್ವಲ್ಪ‌‌ ಮಳೆಯಾದರೂ ರಸ್ತೆ, ಮನೆಗಳಿಗೆ ನೀರು ನುಗ್ಗುತ್ತದೆ. ಒಳಚರಂಡಿ ವ್ಯವಸ್ಥೆ ಅಚ್ಚುಕಟ್ಟಾಗಿಲ್ಲ. ಹೀಗೆ ಸಾರ್ವಜನಿಕರು ದೂರುಗಳ ಸರಮಾಲೆಯನ್ನೇ ನೀಡುತ್ತಿದ್ದಾರೆ.

1200 ಹುದ್ದೆ ಖಾಲಿ : ಪಾಲಿಕೆ ವ್ಯಾಪ್ತಿಯಲ್ಲಿ ಹಲವು ತಿಂಗಳಿಂದ 1,200 ಹುದ್ದೆಗಳು ಖಾಲಿ ಇವೆ. ನಗರ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಹುದ್ದೆಗಳ ಉಸ್ತುವಾರಿ ಅಧಿಕಾರಿಗಳು ನೇಮಕವಾಗಿಲ್ಲ.

ಹೀಗಾಗಿ, ನಗರ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಬೇಕು. ಇತ್ತ ತಾತ್ಕಾಲಿಕ ನೇಮಕಕ್ಕೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಅಧಿಕಾರಿ ಹಲವು ಹುದ್ದೆ ನಿರ್ವಹಣೆ : ಪಾಲಿಕೆಯಲ್ಲಿ ಶೇ. 30ರಷ್ಟು ಸಿಬ್ಬಂದಿ ಮಾತ್ರ ಇದ್ದಾರೆ. ಇದರಲ್ಲಿ ಒಬ್ಬೊಬ್ಬರಿಗೂ ಹೆಚ್ಚುವರಿ ಹುದ್ದೆಗಳನ್ನು ವಹಿಸಲಾಗಿದೆ. ಮುಖ್ಯವಾಗಿ ಕ್ಲಾಸ್ ಒನ್ ಹುದ್ದೆಗಳ ಕುರ್ಚಿಗಳಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳೇ ಇಲ್ಲ.

ವಿಜಯನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ

ಪ್ರಥಮ ದರ್ಜೆ ಹುದ್ದೆ ಕುರ್ಚಿಗಳೇ ಖಾಲಿ: ಪಿಡಬ್ಲ್ಯೂಡಿ, ಕಂದಾಯ, ಕಸ ವಿಲೇವಾರಿ ಆಫೀಸರ್, ಹೆಲ್ತ್ ಇನ್ಸ್​​ಪೆಕ್ಟರ್ಸ್​, ಸೂಪರಿಂಡೆಂಟ್​ ಇಂಜಿನಿಯರ್ಸ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಗಳಿಗೆ ಸರ್ಕಾರ ನೇಮಕಕ್ಕೆ ತಲೆಕೆಡಿಸಿಕೊಂಡಿಲ್ಲ.

ಖಾಲಿ ಹುದ್ದೆಗಳ ನೇಮಕ ಕುರಿತು ಸಚಿವರ ಹಾಗೂ ಸ್ಥಳೀಯ ಜನ‌ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

Last Updated : Nov 23, 2020, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.