ETV Bharat / state

ಖಾಸಗಿ ಆಸ್ಪತ್ರೆಗಳಿಗೆ ನೀಡುವ ಸೇವಾ ಶುಲ್ಕ ಕಡಿಮೆಯಾಗಿದೆ: ಡಾ ಎಲ್ ಎಚ್ ಬಿದರಿ - Yashavini Yojana Service Fee

ರಾಜ್ಯ ಸರ್ಕಾರ ಬಡವರಿಗಾಗಿ ಯಶಸ್ವಿನಿ ಯೋಜನೆಯನ್ನು ಮತ್ತೆ ಆರಂಭಿಸಲಿದೆ. ಖಾಸಗಿ ಆಸ್ಪತ್ರೆಗಳಿಗೆ ನೀಡುವ ಸೇವಾ ಶುಲ್ಕ ಕಡಿಮೆಯಾಗಿದೆ ಎಂದು ವಿಜಯಪುರದಲ್ಲಿ ಡಾ ಎಲ್ ಎಚ್ ಬಿದರಿ ಆರೋಪಿಸಿದರು.

Former President of Private Hospitals Association Dr LH Bidari
ಖಾಸಗಿ ಆಸ್ಪತ್ರೆಗಳ ಸಂಘದ ಮಾಜಿ ಅಧ್ಯಕ್ಷ ಡಾ ಎಲ್.ಎಚ್ ಬಿದರಿ
author img

By

Published : Dec 18, 2022, 5:01 PM IST

Updated : Dec 18, 2022, 5:44 PM IST

ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘದ ಮಾಜಿ ಅಧ್ಯಕ್ಷ ಡಾ ಎಲ್ ಎಚ್ ಬಿದರಿ

ವಿಜಯಪುರ : ರಾಜ್ಯ ಸರ್ಕಾರ ಬಡವರಿಗಾಗಿ ಯಶಸ್ವಿನಿ ಯೋಜನೆಯನ್ನು 2023 ರ ಜನವರಿ 1 ರಿಂದ ಪುನಾರಂಭಿಸುತ್ತಿರುವುದು ಶ್ಲಾಘನೀಯ. ಆದರೆ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಸೇವಾ ಶುಲ್ಕ ಕಡಿಮೆಯಾಗಿದೆ ಎಂದು ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘದ ಮಾಜಿ ಅಧ್ಯಕ್ಷ ಡಾ ಎಲ್ ಎಚ್ ಬಿದರಿ ಆರೋಪಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಶಸ್ವಿನಿ ಯೋಜನೆ 2003 ರಲ್ಲಿ ಪ್ರಾರಂಭಗೊಂಡು 2018 ರವರೆಗೆ ಜಾರಿಯಲ್ಲಿತ್ತು. ಈ ಅವಧಿಯಲ್ಲಿ 14,07,208 ರೈತರು ಈ ಯೋಜನೆಯ ಲಾಭ ಪಡೆದಿದ್ದು, 24,48,496 ಸದಸ್ಯರು ಹೊರ ರೋಗಿಯಾಗಿ ಫಲಾನುಭವಿಗಳಾಗಿದ್ದಾರೆ‌‌. ರೈತರು ಯೋಜನೆಗಾಗಿ 730.26 ಕೋಟಿ ಸದಸ್ಯತ್ವ ನೋಂದಣಿ ಶುಲ್ಕ ಕೊಟ್ಟಿದ್ದು, ಕರ್ನಾಟಕ ಸರ್ಕಾರ 936 ಕೋಟಿ ಅನುದಾನ ನೀಡಿದೆ. ಸರಾಸರಿ 17 ಸಾವಿರ ವೆಚ್ಚದಲ್ಲಿ ಎಲ್ಲ ತರಹದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೀಗಿದ್ದರೂ ಇಂತಹ ಯೋಜನೆ ಬಂದ್ ಮಾಡಿದ್ದು ಖೇದಕರ ಎಂದರು.

ಇದೀಗ ಯೋಜನೆಯನ್ನು ಪುನಾರಂಭಿಸುತ್ತಿರುವುದು ಶ್ಲಾಘನೀಯವಾಗಿದೆ. ಆದರೆ 2010 ರಲ್ಲಿ ಯಶಸ್ವಿನಿ ಟ್ರಸ್ಟ್ ನಿಗದಿಪಡಿಸಿದ್ದ ಪ್ಯಾಕೇಜ್​ಗಳನ್ನು 12 ವರ್ಷಗಳ ನಂತರ ಹಣದುಬ್ಬರ, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚ ಯಾವುದನ್ನೂ ಪರಿಗಣಿಸದೆ. ಸುವರ್ಣ ಆರೋಗ್ಯ ಟ್ರಸ್ಟ್ ದಲ್ಲಿ ನಿಗದಿಪಡಿಸಿದ ದರಗಳನ್ನು ಮರುಪ್ರಾರಂಭ ಮಾಡಿದ ಯಶಸ್ವಿನಿ ಯೋಜನೆಗೆ ಅನ್ವಯ ಮಾಡಿದ್ದು, ಅತ್ಯಂತ ಅಸಮಂಜಸ ಹಾಗೂ ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಸಿಜೇರಿಯನ್ ಚಿಕಿತ್ಸೆಗೆ 12 ವರ್ಷಗಳ ಹಿಂದೆ 10 ಸಾವಿರ ರೂಪಾಯಿ ನಿಗದಿಯಾಗಿತ್ತು. ಅದೇ ಚಿಕಿತ್ಸೆಯನ್ನು ಈಗ 9 ಸಾವಿರ ರೂ.ಗಳಲ್ಲಿ ಹೇಗೆ ಮಾಡಲು ಸಾಧ್ಯ? ಸರ್ಕಾರವೇ ಅರವಳಿಕೆ ತಜ್ಞರಿಗೆ 2500 ರೂಪಾಯಿ ನಿಗದಿ ಮಾಡಿದ್ದು ಉಳಿದ 6500 ರೂಪಾಯಿಗಳಲ್ಲಿ ಸಿಬ್ಬಂದಿ ವೇತನ, ಬೆಡ್ ಚಾರ್ಜಸ್, ಔಷಧ, ಲ್ಯಾಬೋರೇಟರಿ ವೆಚ್ಚ, ಸರ್ಜನ್ ಸೇವಾ ಶುಲ್ಕ ಹೇಗೆ ಸರಿದೂಗಿಸುವುದು? ಎಂದು ಪ್ರಶ್ನೆ ಮಾಡಿದರು. ಈ ವಿಚಾರದಲ್ಲಿ ಕರ್ನಾಟಕ ಖಾಸಗಿ ವೈದ್ಯರ ಸಂಘ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಎಕ್ಸಪರ್ಟ್ ಕಮೀಟಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ವಿಷಾದನೀಯವಾಗಿದೆ ಎಂದರು.

ಕಾರಣ ಸರ್ಕಾರ, ಆರೋಗ್ಯ ಇಲಾಖೆ ಯಶಸ್ವಿನಿ ಯೋಜನೆಯ ಸೇವಾ ಶುಲ್ಕ ಮರುಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರ ನಿಗದಿ ಪಡಿಸಿರೋ ಶುಲ್ಕದಲ್ಲಿ ನಾವು ಸೇವೆ ನೀಡಲು ಆಗಲ್ಲಾ. ಈ ನಾವು ಹೈಕೋರ್ಟ್ ಗಮನಕ್ಕೆ ಹಾಗೂ ಲೋಕಾಯುಕ್ತ ಗಮನಕ್ಕೆ ತರೋದಾಗಿ ಹೇಳಿದರು.

ಇದನ್ನೂ ಓದಿ :ಅ.2ರಿಂದ ಯಶಸ್ವಿನಿ ಯೋಜನೆ ಮರು ಜಾರಿ: ಸಚಿವ ಎಸ್​ಟಿ ಸೋಮಶೇಖರ್ ಸ್ಪಷ್ಟನೆ

Last Updated : Dec 18, 2022, 5:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.