ETV Bharat / state

ಕೂಡಲೇ ಬಾಕಿ ವೇತನ ಪಾವತಿಸಿ; ಕೆಎಸ್​ಆರ್​ಟಿಸಿ ನೌಕರರ ಪ್ರತಿಭಟನೆ - ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಒಕ್ಕೂಟ ಧರಣಿ ಸತ್ಯಾಗ್ರಹ

ಕೊರೊನಾ ಸಂದರ್ಭ ತಮ್ಮ ಜೀವದ ಹಂಗು ತೊರೆದು ಕಾರ್ಮಿಕರು ಕೆಲಸ‌ ಮಾಡಿದ್ದಾರೆ. ಆದ್ರೂ‌ ಸರ್ಕಾರ ಕೆಎಸ್‌ಆರ್‌ಟಿಸಿ ಕಾರ್ಮಿಕರನ್ನ ಕಡೆಗಣಿಸುತ್ತಿದೆ ಎಂದು ಕಾರ್ಮಿಕರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

protest
ಪ್ರತಿಭಟನೆ
author img

By

Published : Nov 26, 2020, 5:17 PM IST

ವಿಜಯಪುರ: ಬಾಕಿ ವೇತನ ಪಾವತಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಒಕ್ಕೂಟ ಧರಣಿ ಸತ್ಯಾಗ್ರಹ ನಡೆಸಿದರು.

ಕೆಎಸ್​ಆರ್​ಟಿಸಿ ನೌಕರರ ಪ್ರತಿಭಟನೆ

ನಗರದ ಅಥಣಿ ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದ ಹಿಂಭಾಗದಲ್ಲಿ, ಕೆಎಸ್‌ಆರ್‌ಟಿಸಿ ಕಾರ್ಮಿಕರು ಸರ್ಕಾರ ವಿರುದ್ಧ ಘೋಷಣೆ ಕೂಗಿ, ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸಾರಿಗೆ ಕಾರ್ಮಿಕರು ದಿನದ 24 ಗಂಟೆಗಳ ಕರ್ತವ್ಯ ನಿರ್ವಹಿಸಿದರೂ, ಸರ್ಕಾರ ಮಾತ್ರ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ಕೆ‌ ಮುಂದಾಗುತ್ತಿಲ್ಲ. ವಾರ್ಷಿಕ ವೇತನ ಬಡ್ತಿ, ರಜೆ ನಿಗದೀಕರಣ ಸೌಲಭ್ಯ, ಕಾರ್ಮಿಕರ ನಿವೃತ್ತಿ ನಂತರ ಭವಿಷ್ಯ ನಿಧಿ ನಿಗದಿತ ಕಾಲಕ್ಕೆ ಒದಗಿಸುವಂತೆ ಧರಣಿ ನಿರತ ಕಾರ್ಮಿಕರು ಸರ್ಕಾರಕ್ಕೆ ಒತ್ತಾಯಿಸಿದರು‌.

ಇನ್ನು ಕೊರೊನಾ ಸಂದರ್ಭ ತಮ್ಮ ಜೀವದ ಹಂಗು ತೊರೆದು ಕಾರ್ಮಿಕರು ಕೆಲಸ‌ ಮಾಡಿದ್ದಾರೆ. ಆದ್ರೂ‌ ಸರ್ಕಾರ ಕೆಎಸ್‌ಆರ್‌ಟಿಸಿ ಕಾರ್ಮಿಕರನ್ನ ಕಡೆಗಣಿಸುತ್ತಿದೆ ಎಂದು ಕಾರ್ಮಿಕರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ತಕ್ಷಣವೇ ಕಾರ್ಮಿಕರ ವೇತನ ಹೆಚ್ಚಳ. ಮುಂಬಡ್ತಿ ,ಸರ್ಕಾರಿ ಸೌಲಭ್ಯ ನೀಡುವಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.