ವಿಜಯಪುರ: ಗುರುವಾರ ಸಂಭವಿಸಿದ್ದ ಕಂಕಣ ಸೂರ್ಯಗ್ರಹಣದ ಸಂದರ್ಭದಲ್ಲಿ ತಿಪ್ಪೆಯಲ್ಲಿ ಕುತ್ತಿಗೆವರೆಗೂ ವಿಕಲಚೇತನ ಮಗನನ್ನು ಹೂತಿಟ್ಟಿದ್ದ ತಂದೆ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ..ಗ್ರಹಣದ ದಿನ ಅಂಗವಿಕಲತೆ ನಿವಾರಣೆಗೆ ತಿಪ್ಪೆಯಲ್ಲಿ ಮಕ್ಕಳನ್ನು ಹೂತಿಟ್ಟ ಪೋಷಕರು!
ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ 22 ವರ್ಷದ ಪಪ್ಪು ಕುತುಬುದ್ದೀನ್ ಮುಲ್ಲಾ ಎಂಬ ಯುವಕನನ್ನು ಕುತ್ತಿಗೆವರೆಗೂ ತಿಪ್ಪೆಯಲ್ಲಿ ಹೂಳಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 336, 342, 508 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನ ತಂದೆ ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.