ವಿಜಯಪುರ: ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ನ ಆಲಮಟ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜಿಲ್ಲೆಯ ನಿಡಗುಂದಿಯಲ್ಲಿರುವ ಆಲಮಟ್ಟಿಯ ಡಿಎಫ್ಓ ಪಿ.ಕೆ. ನಾಯಕ(58) ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರಾಖಂಡನ್ ಡೆಹರಾಡೂನ್ ಬಳಿ ಟ್ರೆಕ್ಕಿಂಗ್ನಲ್ಲಿದ್ದಾಗ ತೀವ್ರ ಹೃದಯಾಘಾತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಪಿ.ಕೆ. ನಾಯಕ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿದ್ದರು.

ಡೆಹ್ರಾಡೂನ್ ಬಳಿ ಟ್ರೆಕ್ಕಿಂಗ್ ಜತೆ ಫೋಟೋಗ್ರಾಫಿಗಾಗಿ ತೆರಳಿದಾಗ ತೀವ್ರ ಹಿಮ ಕುಸಿತದ ಕಾರಣ ಹವಾಮಾನ ವೈಪರಿತ್ಯವಾಗಿದೆ. ಈ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರನ್ನು ಅರಣ್ಯಾಧಿಕಾರಿ ನಾಯಕ ಅಗಲಿದ್ದಾರೆ.
ಆಲಮಟ್ಟಿಯಿಂದ ಡೆಹ್ರಾಡೂನ್‌ಗೆ ಮೂರು ಜನ ಅರಣ್ಯಾಧಿಕಾರಿಗಳು ತೆರಳಿದ್ದರು. ವಿಜಯಪುರ ಕೊಳ್ಳೆಯನ್ನು ಹಸರೀಕರಣ ಮಾಡಲು ಶ್ರಮಿಸಿದ್ದರು. ಡಿಎಫ್ಓ ನಾಯಕ ಅವರ ನಿಧನಕ್ಕೆ ಮಾಜಿ ಸಚಿವ ಎಂ. ಬಿ. ಪಾಟೀಲ್ ಸಂತಾಪ ಸೂಚಿಸಿದ್ದಾರೆ.