ವಿಜಯಪುರ: ಕೇಂದ್ರ ಸರ್ಕಾರ ದೇಸಿ ಕೈಗಾರಿಕೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಉಳಿಸಿ ಬೆಳೆಸಲು ಮುಂದಾಗಬೇಕೆಂದು ಸ್ವದೇಶಿ ಜಾಗರಣ ಮಂಚ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ರು.
ದೇಶದಲ್ಲಿ 4000ಕ್ಕೂ ಅಧಿಕ ಕಂಪನಿಗಳು ಕಾರ್ಯನಿವರ್ಹಿಸುತ್ತಿವೆ. ಹೀಗಾಗಿ ಅಪಾರ ಸಂಪತ್ತು ವಿದೇಶದಕ್ಕೆ ಹರಿದು ಹೋಗುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ವಿದೇಶಿ ಕಂಪನಿಗಳ ಪಾಲು ಕೇವಲ 2% ಮಾತ್ರ ಇದ್ದು, ದೇಶದಲ್ಲಿ ತಯಾರಿಸಿದ ಸರಕುಗಳಿಗೆ ಹೆಚ್ಚಿನ ಆಮದು ಸುಂಕವಿರಬೇಕು. ಸರ್ಕಾರ ದೇಶಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.
ದೇಶದಲ್ಲಿ 7 ಕೋಟಿಗಿಂತ ಅಧಿಕ ಗುಡಿ ಕೈಗಾರಿಕೆಗಳಿದ್ದು, ಸರ್ಕಾರ ಇವುಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಬೇಕು. ಸಾಲ ಸೌಲಭ್ಯ ನೀಡಿದರೆ ದೇಶಿ ವಸ್ತುಗಳ ಬಳಕೆ ಹೆಚ್ಚಾಗುತ್ತದೆ. ಯುವಕರಿಗೆ ಉದ್ಯೋಗ ಸೃಷ್ಟಿ ಅಧಿಕವಾಗುತ್ತದೆ. ದೇಶವೂ ಕೂಡ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಸ್ವದೇಶಿ ಜಾಗರಣ ಮಂಚ್ ಕಾರ್ಯಕರ್ತರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು.