ವಿಜಯಪುರ: ರೈತರ ಹಿಂಗಾರು ಬೆಳೆಗೆ ಡಿ.1ರಿಂದ ಹಂತ ಹಂತವಾಗಿ ಆಲಮಟ್ಟಿ ಜಲಾಶಯದಿಂದ ನೀರು ಹರಿಸಲು ನಿರ್ಣಯಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಆಲಮಟ್ಟಿಯಲ್ಲಿ ಡಿಸಿಎಂ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟು ಆಲಮಟ್ಟಿ ಜಲಾಶಯದಲ್ಲಿ 118 ಟಿಎಂಸಿ ನೀರು ಸಂಗ್ರಹವಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂದು 39 ಟಿಎಂಸಿ ನೀರು ಸಂಗ್ರಹಿಸಲಾಗುವುದು ಎಂದರು.
ರೈತರ ಹಿಂಗಾರು ಹಂಗಾಮಿ ಬೆಳೆಗೆ ಡಿಸೆಂಬರ 1ರಿಂದ ಮುಂದಿನ ವರ್ಷ ಮಾರ್ಚ್ 20ರವರೆಗೆ ಬಾಗಲಕೋಟೆ, ವಿಜಾಪುರ, ಯಾದಗಿರಿ ಹಾಗೂ ರಾಯಚೂರಿ ಜಿಲ್ಲೆಗೆ 14 ದಿನ ನೀರು ಹರಿಸಲಾಗುವುದು. 8 ದಿನ ನೀರು ಬಂದ್ ಮಾಡಲಾಗುವುದು. ಇದರ ಜೊತೆಗೆ ಕೆರೆ, ಬಾಂದಾರ್ ಹಾಗೂ ಬ್ಯಾರೇಜ್ಗಳಿಗೂ ನೀರು ಹರಿಸಲು ನಿರ್ಧರಿಸಲಾಗಿದೆ. ಮುಂದಿನ ಸಭೆಯಲ್ಲಿ ರೈತರಿಗೆ ಹೆಚ್ಚುವರಿ ನೀರು ಬಿಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.