ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ, ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಭಾನುವಾರ ಬೆಳಗ್ಗೆ ಜಲಾಶಯಕ್ಕೆ 1,50,750 ಕ್ಯೂಸೆಕ್ (ಒಳಹರಿವು) ನೀರು ಹರಿದು ಬಂದಿದೆ. ಕಳೆದ ಒಂದು ವಾರದಿಂದ ಜಲಾಶಯದಿಂದ ನೀರು ಹೊರ (ಹೊರಹರಿವು) ಬಿಡುತ್ತಿಲ್ಲ. ಜಲಾಶಯದ ಸಾಮರ್ಥ್ಯ 519.60 ಮೀಟರ್ ಇದ್ದು, ಪ್ರಸ್ತುತ 513.56 ಮೀಟರ್ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಈ ವೇಳೆಗೆ 512.62 ಮೀಟರ್ನಷ್ಟು ನೀರು ಸಂಗ್ರಹವಾಗಿತ್ತು.
ಇದನ್ನೂ ಓದಿ : ಚಿಕ್ಕಪಡಸಲಗಿ ಬ್ಯಾರೇಜ್ ಜಲಾವೃತ; ಅಪಾಯ ಲೆಕ್ಕಿಸದೆ ಯುವಕರ ಸೆಲ್ಫಿ ಕ್ರೇಜ್