ETV Bharat / state

ರಾಷ್ಟ್ರೀಯ ಉತ್ಸವಗಳಲ್ಲಿ ಗಾಂಧೀಜಿ ಜೊತೆಗೆ ಸಂಗೊಳ್ಳಿ ರಾಯಣ್ಣನಿಗೂ ಗೌರವ ಸಲ್ಲಿಸಿ - Muddebhila ndependence Day Celebration News

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸರೂರ ಗ್ರಾಮದವರೆಗೆ ವಿಶೇಷ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಉತ್ಸವಗಳಲ್ಲಿ ಗಾಂಧೀಜಿ ಜೊತೆಗೆ ರಾಯಣ್ಣನಿಗೂ ಗೌರವ ಸಲ್ಲಿಸಿ

author img

By

Published : Aug 16, 2020, 10:40 AM IST

ಮುದ್ದೇಬಿಹಾಳ : ರಾಷ್ಟ್ರೀಯ ಉತ್ಸವಗಳಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನವರಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ಗೌರವ ಸಲ್ಲಿಸುವ ಕಾರ್ಯ ಮಾಡಬೇಕು ಎಂದು ವಕೀಲ ಸಿದ್ದನಗೌಡ ಬಿರಾದಾರ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸರೂರ ಗ್ರಾಮದವರೆಗಿನ ಬೈಕ್ ರ‍್ಯಾಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿ ಭಾವಚಿತ್ರದ ಜೊತೆಗೆ ರಾಯಣ್ಣನ ಫೋಟೋಗೂ ಪೂಜೆ ಮಾಡಬೇಕು. ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾನೆ. ರಾಷ್ಟ್ರಪಿತ ಗಾಂಧೀಜಿ ಎಷ್ಟು ಶ್ರೇಷ್ಠವೋ ಅಷ್ಟೇ ಶ್ರೇಷ್ಠ ಸಂಗೊಳ್ಳಿ ರಾಯಣ್ಣನಾಗಿದ್ದಾನೆ ಎಂದರು.

ರಾಷ್ಟ್ರೀಯ ಉತ್ಸವಗಳಲ್ಲಿ ಗಾಂಧೀಜಿ ಜೊತೆಗೆ ಸಂಗೊಳ್ಳಿ ರಾಯಣ್ಣನಿಗೂ ಗೌರವ ಸಲ್ಲಿಸಿ

ತಾ. ಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಹವಾಲ್ದಾರ, ವಕೀಲ ಪಿ.ಬಿ.ಮಾತಿನ, ಪವಾಡೆಪ್ಪ ಹವಾಲ್ದಾರ, ಅಡಿವೆಪ್ಪ ಕನ್ನೂರ, ಪ್ರಕಾಶ ಚಲವಾದಿ, ಬಸವರಾಜ ಹುಲಗಣ್ಣಿ ಇದ್ದರು. ಇದಕ್ಕೂ ಮುನ್ನ ಕುರುಬರ ಸಂಘದ ತಾಲೂಕಾಧ್ಯಕ್ಷ ಎಂ.ಎನ್.ಮದರಿ ರಾಯಣ್ಣ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.