ETV Bharat / state

ರಂಜಾನ್‌ ಮಾಸದಲ್ಲಿ ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ

author img

By

Published : May 27, 2019, 10:43 PM IST

ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಬಾಂಧವರು ಉಪವಾಸ, ನಮಾಜ್‌, ಪ್ರಾರ್ಥನೆ ಪುಣ್ಯ ಕಾರ್ಯಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹಾಗೆಯೇ ಉಪವಾಸ ಮಾಡಿ, ಸಂಜೆ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಉಪವಾಸ ತ್ಯಜಿಸುತ್ತಾರೆ. ವ್ರತ ಬಿಡುವಾಗ ಹಣ್ಣಿನ ರಸ, ಹಣ್ಣು ಸೇವಿಸುವುದರಿಂದ ಹಣ್ಣಿಗೆ ಮತ್ತಷ್ಟು ಬೇಡಿಕೆ ಹೆಚ್ಚಿದೆ.

ರಂಜಾನ್‌ ಮಾಸದಲ್ಲಿ ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ

ವಿಜಯಪುರ : ಈ ಬಾರಿ ಕಡು ಬಿಸಿಲಿನೊಂದಿಗೆ ರಂಜಾನ್‌ ತಿಂಗಳು ಆರಂಭವಾಗಿದ್ದರಿಂದ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದ್ದು, ಬೇಸಿಗೆ ಬಿಸಿಲಿನ ತಾಪಮಾನವನ್ನು ಲೆಕ್ಕಿಸದೆ ಮುಸ್ಲಿಂ ಬಾಂಧವರು ರಂಜಾನ್‌ ತಿಂಗಳ ಉಪವಾಸ ಆಚರಣೆಯಲ್ಲಿ ನಿರತರಾಗಿದ್ದಾರೆ.

ರಂಜಾನ್‌ ಮಾಸದಲ್ಲಿ ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ

ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಬಾಂಧವರು ಉಪವಾಸ, ನಮಾಜ್‌, ಪ್ರಾರ್ಥನೆ ಪುಣ್ಯ ಕಾರ್ಯಗಳತ್ತ ಹೆಚ್ಚು ಒಲವು ತೋರಿರುತ್ತಾರೆ. ಈಗ ಎಲ್ಲರ ಮನೆಯಲ್ಲಿಯೂ ಸಂಭ್ರಮ ಮನೆ ಮಾಡಿದ್ದು, ಮಕ್ಕಳಾಗಲಿ, ವೃದ್ಧರಾಗಲಿ ಎಲ್ಲರೂ ಉಪವಾಸವನ್ನು ಹುಮ್ಮಸ್ಸಿನಿಂದಲೇ ಮಾಡುತ್ತಿದ್ದಾರೆ. ದಿನವೆಲ್ಲ ನೀರು ಕುಡಿಯದೇ ಉಪವಾಸ ಮಾಡಿ, ಸಂಜೆ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಉಪವಾಸ ತ್ಯಜಿಸುತ್ತಾರೆ. ವ್ರತ ಬಿಡುವಾಗ ಹಣ್ಣಿನ ರಸ, ಹಣ್ಣು ಸೇವಿಸುವುದರಿಂದ ಹಣ್ಣಿಗೆ ಮತ್ತಷ್ಟು ಬೇಡಿಕೆ ಸಿಕ್ಕಿದೆ.

ಈ ಬಾರಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಹಣ್ಣಿನ ದರ ಮತ್ತಷ್ಟು ಗಗನಕ್ಕೇರಿದೆ. ಅದರಲ್ಲೂ ನೀರಿನಾಂಶವುಳ್ಳ ಕಲ್ಲಂಗಡಿ ರಂಜಾನ್‌ ತಿಂಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ. 20-25 ರೂ.ಗೆ ಕೆಜಿಯಂತೆ ಬೇಡಿಕೆ ಹೆಚ್ಚಿಸಿಕೊಂಡಿದೆ. ಕರ​ಬೂಜ 50 ರೂ., ಬಾಳೆಹಣ್ಣು 50 ರಿಂದ 120, ಸೇಬು ಕೆಜಿ ಗೆ 250-350 ರೂ. ಇದೆ. ಹಾಗೆಯೇ ಖರ್ಜೂರ ಕೂಡ ಹೇರಳವಾಗಿ ಮಾರಾಟವಾಗುತ್ತಿದೆ.

ಇನ್ನು ಮನಸ್ಸನ್ನು ನಿಗ್ರಹಿಸುವುದನ್ನು ಕಲಿಸುವ ಈ ಹಬ್ಬವು ದಾನ-ಧರ್ಮ, ಸಾಮರಸ್ಯವನ್ನೂ ಸಹ ಬೋಧಿಸುತ್ತದೆ. ಹೀಗಾಗಿ ಸಾಮೂಹಿಕವಾಗಿ ಉಪವಾಸ ತ್ಯಜಿಸಲು ಇಫ್ತಾರಕೂಟಗಳನ್ನು ಆಯೋಜಿಸಿ, ದಾನಿಗಳು ಹಣ್ಣು-ತಿಂಡಿ ಪದಾರ್ಥದ ವ್ಯವಸ್ಥೆ ಕೂಡ ಮಾಡಿರುತ್ತಾರೆ. ಸಂಜೆಯಾದಂತೆ ನಗರದ ಕೆಲವು ಹೋಟೆಲ್​ಗಳಲ್ಲಿ ತಯಾರಾಗಿರುವ ವಿವಿಧ ಬಗೆಯ ತಿಂಡಿ ಪದಾರ್ಥಗಳನ್ನು ಖರೀದಿಸಿ ಬ್ಯಾಗ್​ನೊಂದಿಗೆ ಎಲ್ಲರೂ ಮನೆಯತ್ತ ತೆರಳಿದರೆ, ಕೆಲವರು ಮಸೀದಿಯತ್ತ ಹೆಜ್ಜೆ ಹಾಕುತ್ತಾರೆ.

ಒಟ್ಟಿನಲ್ಲಿ ರಂಜಾನ್​ ಹಬ್ಬದ ನಿಮಿತ್ತ ಮನೆಯಲ್ಲಿ ಹಿರಿಯ-ಕಿರಿಯರು ಎಲ್ಲರೂ ಸಂಭ್ರಮದಿಂದ ತಿಂಗಳೆಲ್ಲ ಉಪವಾಸ ಮಾಡುತ್ತಾರೆ. ಕರ್ಮಗಳನ್ನು ಕಳೆದುಕೊಂಡು ಭಗವಂತನನ್ನು ಸ್ಮರಿಸಿ, ಪುಣ್ಯ ಸಂಪಾದಿಸಿಕೊಳ್ಳಲು ಇದು ಸೂಕ್ತ ಕಾಲ. ಹೀಗಾಗಿ ಉಪವಾಸ ಬಿಡುವಾಗ ಹಣ್ಣುಗಳು ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿವೆ.

Intro:File name: ramzan festival
Formate : pkg
Reporter: Suraj risaldar
Place: vijaypur
Date: 27-05-2019

Slug: ರಂಜಾನ್‌ ಮಾಸ’ ಹಣ್ಣು ಹಾಗೂ ತಿಂಡಿ ಪದಾರ್ಥಗಳಿಗೆ ಹೆಚ್ಚಿದ ಬೇಡಿಕೆ

Anchor:

ಈ ಬಾರಿ ಕಡು ಬಿಸಿಲಿನೊಂದಿಗೆ ರಂಜಾನ್‌ ತಿಂಗಳು ಆರಂಭವಾಗಿದ್ದರಿಂದ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಬೇಸಿಗೆ ಬಿಸಿಲಿನ ತಾಪಮಾನವೂ ಲೆಕ್ಕಿಸದೆ ಮುಸ್ಲಿಂ ಬಾಂಧವರು ರಂಜಾನ್‌ ತಿಂಗಳು ಉಪವಾಸ ಆಚರಣೆಯಲ್ಲಿ ನಿರತರಾಗಿದ್ದಾರೆ. ಮಹಿಳೆ, ಮಕ್ಕಳು, ಹಿರಿಯರು ಎಲ್ಲ ವಯೋಮಾನದವರೂ ದಿನವೆಲ್ಲ ಒಂಚೂರು ನೀರು ಸೇವಿಸದೆ ರೋಜಾ ಮಾಡುತ್ತಿದ್ದಾರೆ. ಹೀಗಾಗಿ ವ್ರತ ಬಿಡುವಾಗ ಸೇವಿಸಲು, ಹಣ್ಣು-ಖರ್ಜೂರ, ಖರೀದಿ ವಿಜಯಪುರ ಜಿಲ್ಲೆಯಾದ್ಯಂತ ಜೋರಾಗಿ ನಡೆದಿದೆ.
Look...Body:V/o1: ಹೌದು ರಂಜಾನ್‌ ಪುಣ್ಯ ಸಂಪಾದಿಸುವ ತಿಂಗಳು. ಉಪವಾಸ, ನಮಾಜ್‌, ಪ್ರಾರ್ಥನೆ ಪುಣ್ಯ ಕಾರ್ಯಗಳತ್ತ ಒಲವು ತೋರಿರುತ್ತಾರೆ. ಈಗ ಎಲ್ಲರ ಮನೆಯಲ್ಲಿ ತಿಂಗಳವರೆಗೆ ಸಂಭ್ರಮ ಮನೆ ಮಾಡಿದೆ. ಮಕ್ಕಳಾಗಲಿ, ವೃದ್ದರು ಆಗಲಿ ಎಲ್ಲರೂ ಉಪವಾಸವನ್ನು ಹುಮ್ಮಸ್ಸಿನಿಂದಲೇ ಮಾಡುತ್ತಿದ್ದಾರೆ. ದಿನವೆಲ್ಲ ನೀರು ಕುಡಿಯದೇ ಉಪವಾಸ ಮಾಡುವುದರಿಂದ, ಸಂಜೆ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಉಪವಾಸ ತ್ಯಜಿಸುತ್ತಾರೆ. ವ್ರತ ಬಿಡುವಾಗ ಹಣ್ಣಿನ ರಸ, ಹಣ್ಣು ಸೇವಿಸುವುದರಿಂದ ಹಣ್ಣಿಗೆ ಮತ್ತಷ್ಟು ಬೇಡಿಕೆ ಸಿಕ್ಕಿದೆ. ಈ ಸಲ ಬರದ ಛಾಯೆ ಆವರಿಸಿದ್ದು, ಹಣ್ಣಿನ ದರ ಮತ್ತಷ್ಟು ಗಗನಮುಖಿಯಾಗಿದೆ. ಜನರು, ತಮ್ಮ ಜೇಬು ನೋಡಿಕೊಂಡು ಖರೀದಿ ಮಾಡುತ್ತಿದ್ದಾರೆ.
ಅದರಲ್ಲೂ ನೀರಿನಾಂಶವುಳ್ಳ ಕಲ್ಲಂಗಡಿ ರಂಝಾನ್‌ ತಿಂಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ. 20-25 ರೂ.ಗೆ ಕೆಜಿಯಂತೆ ಬೇಡಿಕೆ ಹೆಚ್ಚಿಸಿಕೊಂಡಿದೆ. ಕರಬೂಜ 50 ರೂ., ಬಾಳೆಹಣ್ಣು 50ರಿಂದ 120, ಸೇಬು 250-350 ರೂ.ಗೆ ಕೆಜಿ, ಸಂತರಿ, ಮೋಸಂಬಿ 250-300 ರೂ. ಮುಂತಾದ ಹಣ್ಣುಗಳೊಂದಿಗೆ ಖರ್ಜೂರ ಕೂಡ ಹೇರಳವಾಗಿ ಮಾರಾಟವಾಗುತ್ತಿದೆ.
ಪ್ಲೋ...
ಇನ್ನೂ ಮನಸ್ಸನ್ನು ನಿಗ್ರಹಿಸುವುದನ್ನು ಕಲಿಸುವ ಈ ಹಬ್ಬವು ಧಾನ-ಧರ್ಮ, ಸಾಮರಸ್ಯವನ್ನೂ ಬೋಧಿಸುತ್ತದೆ. ಹೀಗಾಗಿ ಸಾಮೂಹಿಕವಾಗಿ ಉಪವಾಸ ತ್ಯಜಿಸಲು ಇಫ್ತಾರಕೂಟಗಳನ್ನು ಆಯೋಜಿಸಿ, ದಾನಿಗಳು ಹಣ್ಣು-ತಿಂಡಿ ಪದಾರ್ಥದ ವ್ಯವಸ್ಥೆ ಕೂಡ ಮಾಡಿರುತ್ತಾರೆ. ಇನ್ನೂ ಸಂಜೆಯಾದಂತೆ ನಗರದ ಕೆಲವು ಹೋಟೆಲ್ ಗಳಲ್ಲಿ ತಯಾರಾಗಿರುವ ವಿವಿಧ ಬಗೆಯ ತಿಂಡಿ ಪದಾರ್ಥಗಳನ್ನು ಖರಿದಿಸಿ ಬ್ಯಾಗನೊಂದಿಗೆ ಎಲ್ಲರೂ ಮನೆಯತ್ತ ,ಕೆಲವರು ಮಸೀದಿಯತ್ತ ಹೆಜ್ಜೆ ಹಾಕುತ್ತಾರೆ.

ಬೈಟ್: ಉಸ್ಮಾನ್ , ಅಂಗಡಿ ಮಾಲೀಕConclusion:ಒಟ್ನಲ್ಲಿ ರಂಜಾನ ಹಬ್ಬದ ನಿಮಿತ ಮನೆಯಲ್ಲಿ ಹಿರಿಯ-ಕಿರಿಯರು ಎಲ್ಲರೂ ಸಂಭ್ರಮದಿಂದ ತಿಂಗಳೆಲ್ಲ ಉಪವಾಸ ಮಾಡುತ್ತಾರೆ. ಕರ್ಮಗಳನ್ನು ಕಳೆದುಕೊಂಡು ಭಗವಂತನ ಸ್ಮರಿಸಿ, ಪುಣ್ಯ ಸಂಪಾದಿಸಿಕೊಳ್ಳಲು ಇದು ಸಕಾಲ. ಹೀಗಾಗಿ ಉಪವಾಸ ಬಿಡುವಾಗ ಹಣ್ಣು-ಖರ್ಜೂರ ಕೂಡ ಅಷ್ಟೆ ಪ್ರಾಮುಖ್ಯ ಪಡೆದುಕೊಂಡಿದೆ.

ಸೂರಜ್ ರಿಸಾಲ್ದಾರ್
ಈಟಿವಿ ಭಾರತ್ ,ವಿಜಯಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.