ETV Bharat / state

ಜಲಾಶಯದ ಹೊರ ಹರಿವು ಹೆಚ್ಚಾಗಿದ್ದರೂ ಅಕ್ರಮ ಮೀನುಗಾರಿಕೆ - Vijayapur district news

ಆಲಮಟ್ಟಿ ಜಲಾಶಯಕ್ಕೆ ಅಪಾಯದ ಮಟ್ಟದಲ್ಲಿ ಮೀರಿ ನೀರು ಹರಿದು ಬರುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಸ್ಥಳೀಯ ಮೀನುಗಾರರು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.

Illegal fishing
ಅಕ್ರಮವಾಗಿ ಮೀನುಗಾರಿಕೆ
author img

By

Published : Aug 11, 2020, 4:06 PM IST

ವಿಜಯಪುರ: ಆಲಮಟ್ಟಿ ಜಲಾಶಯಕ್ಕೆ ಅಪಾಯದ ಮಟ್ಟದಲ್ಲಿ ಮೀರಿ ನೀರು ಹರಿದು ಬರುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಸ್ಥಳೀಯ ಮೀನುಗಾರರು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.

ಜಲಾಶಯದಿಂದ 22 ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗಿದೆ. ಹೊರ ಹರಿವು ಹೆಚ್ಚಾಗಿದ್ದರೂ ಸ್ಥಳೀಯ ಮೀನುಗಾರರು ಜಲಾಶಯದ ಅಧಿಕಾರಿಗಳ ಕಣ್ತಪ್ಪಿಸಿ ಪ್ರತಿದಿನ ಮೀನು ಹಿಡಿಯುತ್ತಿದ್ದಾರೆ‌. ತೆಪ್ಪದ ಮೂಲಕ ನೀರಿಗೆ ಇಳಿಯುತ್ತಿರುವ ಮೀನುಗಾರರ ಪ್ರಾಣಕ್ಕೆ‌ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. ಕೂಡಲೇ ಅಧಿಕಾರಿಗಳು ಇದಕ್ಕೆ ಕೊಕ್ಕೆ ಹಾಕಲು ಮುಂದಾಗಬೇಕಿದೆ.

ಅಕ್ರಮ ಮೀನುಗಾರಿಕೆ

ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೃಷ್ಣಾ ನದಿಗೆ ಹೆಚ್ಚು ನೀರು ಹರಿದು ಬರುತ್ತಿದೆ. ಹೀಗಾಗಿ, ಜಲಾಶಯದಲ್ಲಿ ನೀರಿನ ಮಟ್ಟ ಅಧಿಕವಾಗುತ್ತಿದೆ. ಅಲ್ಲದೆ, ಜಲಾಶಯದ ಹೊರ ಹರಿವು ಕೂಡ ಹೆಚ್ಚಾಗಿದೆ. ಪ್ರವಾಹ ಭೀತಿಯಿಂದಾಗಿ ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.